ಕಬಕದಲ್ಲಿ ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 7ನೇ ಶಾಖೆ ಉದ್ಘಾಟನೆ

0

ಉದ್ಯಮಗಳು, ಸಹಕಾರಿ‌ ಸಂಸ್ಥೆಗಳು ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ: ಅಶೋಕ್ ಕುಮಾರ್ ರೈ

ವಿಟ್ಲ: ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಿದ ಸಂಸ್ಥೆಗೆ ಸದಾ ನಾವು ಪ್ರೋತ್ಸಾಹ ನೀಡುತ್ತೇವೆ. ಉದ್ಯಮಗಳು, ಸಹಕಾರಿ‌ ಸಂಸ್ಥೆಗಳು ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಮನುಷ್ಯನಿಗೆ ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ ಅತಿ ಅವಶ್ಯಕವಾಗಿದೆ. ಸಮಾಜದಲ್ಲಿ ಎಲ್ಲವನ್ನು ಅರಿತವರು ಹರಿಕೃಷ್ಣ ಬಂಟ್ವಾಳರವರು. ಅವರು ಯಾವುದೇ ಕ್ಷೇತ್ರದಲ್ಲಿ ತೊಡಗಿದರೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಶಕ್ತಿ ಅವರಲ್ಲಿದ್ದು, ಹೀಗಾಗಿ ಈ ಸಹಕಾರಿಯು ಯಶಸ್ಸು ಕಾಣುತ್ತದೆ ಎಂದು ಪುತ್ತೂರು ವಿದಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.

ಕಬಕ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿ ಮೆಲ್ಕಾರ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 7ನೇ ಕಬಕ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಭದ್ರತಾ ಕೊಟಡಿಯನ್ನು ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಉದ್ಘಾಟಿಸಿ ಮಾತನಾಡಿ ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ಸಮರ್ಥ ನಾಯಕ ಮುಖ್ಯ. ಕಬಕದ ಹಿರಿಮೆಗೆ ಒಂದು ಗರಿ ಶ್ರೀಗುರು ಕ್ರೆಡಿಟ್ ಕೋ ಅಪಾರೇಟೀವ್ ಆಗಿದೆ. ನಗರ ಬೆಳೆಯಲು ಆರ್ಥಿಕ ಪರಿಸ್ಥಿತಿಯು ಪ್ರಮುಖ ಕಾರಣವಾಗಿದೆ. ಹಿರಿಯರ ಸಲಹೆ ಸಹಕಾರದಿಂದ ಸಹಕಾರ ಸಂಘ ಬಹಳಷ್ಟು ಹೆಸರು ಮಾಡಿದೆ. ಕಬಕ ಒಂದು ಕೇಂದ್ರ ಬಿಂದುವಾಗಿದೆ. ಹಲವಾರು ಗ್ರಾಮೀಣ ಭಾಗದ ಜನರಿಗೆ ಕಬಕ ಪೇಟೆಯಾಗಿದೆ. ಹರಿಕೃಷ್ಣ ಬಂಟ್ವಾಳ ರವರ ಸಾಧನೆ ಬಹಳಷ್ಟಿದೆ‌. ಸಂಸ್ಥೆಯ ಬೆಳವಣಿಗೆಗೆ ಸಿಬಂದಿ ವರ್ಗಗಳ ಪಾತ್ರ ಬಹಳಷ್ಠಿದೆ ಎಂದರು.

ಕಬಕ ಗ್ರಾ.ಪಂ. ಮಾಜಿ ಉಪಾಧ್ಯಕ್ಷರು, ನಿವೃತ್ತ ಮುಖ್ಯ ಶಿಕ್ಷಕರಾಗಿರುವ ರುಕ್ಮಯ ಗೌಡ ಎಂ.ರವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇದೊಂದು ತ್ಯಾಗದ ಸಂಕೇತ. ಸಂಸ್ಥೆಯ ಹುಟ್ಟು ಸುಪಭವಲ್ಲ. ಬಳಿಕ ನಡೆಸಿಕೊಂಡು ಹೋಗುವುದು ಬಲು ಕಷ್ಟ. ಅರ್ಥಿಕ ಸಂಸ್ಥೆಯ ಆರಂಭ ಹಲವರಿಗೆ ಪ್ರಯೋಜನವಾಗಲಿದೆ. ಗ್ರಾಹಕರ ಬೆಳವಣಿಗೆ ಸಂಸ್ಥೆಯ ಏಳಿಗೆಗೆ ಪೂರಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ನಿ. ಅಧ್ಯಕ್ಷರಾದ ಕೆ. ಹರಿಕೃಷ್ಣ ಬಂಟ್ವಾಳರವರು ವಹಿಸಿದ್ದರು‌. ಇದೇ ಸಂದರ್ಭದಲ್ಲಿ ಸಂಸ್ಥೆಯ ಶುಭಾರಂಭದ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಕೇಶವ ಪೂಜಾರಿರವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಪೂಜಾರಿ ಎಸ್.ಕೆ.,ಯುವವಾಹಿನಿ‌ ವಿಟ್ಲ ವಲಯ ಅಧ್ಯಕ್ಷರಾದ ಕೆ.ಟಿ.ಆನಂದ, ಬ್ರೈಟ್ ಕಾಂಪ್ಲೆಕ್ಸ್ ನ ಮಾಲಕರಾದ ಇಸ್ಮಾಯಿಲ್ ಪಿ., ಸಂಘದ ಉಪಾಧ್ಯಕ್ಷರಾದ ರಮೇಶ್ ಅನ್ನಪ್ಪಾಡಿ, ನಿರ್ದೇಶಕರಾದ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ರತ್ನಾಕರ ಪೂಜಾರಿ ನಾಡಾರು, ಭುವನೇಶ ಪಚ್ಚಿನಡ್ಕ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಸಿ ಇರಾ, ಹರೀಶ್ ಸಿ. ಹೆಚ್. ವಿಟ್ಲ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಲಕ್ಷ್ಮೀ ಪೆರ್ವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚರಣ್ ಕರ್ಬಂಡ್ಕ, ಕಬಕ ಶಾಖಾ ವ್ಯವಸ್ಥಾಪಕರಾದ ಯಶೋಧ ಎಂ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು‌. ಸಂಸ್ಥೆಯ ಸಿಬ್ಬಂದಿ ವಿನುತ ಪ್ರಾರ್ಥಿಸಿದರು.

ನಿರ್ದೇಶಕರಾದ ಕೆ. ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಕರಾದ ಶೈಲೇಶ್ ಪೂಜಾರಿ ಪುಚ್ಚೆಗುಡ್ಡೆ ವಂದಿಸಿದರು. ವಿಜೆ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮೀಣ ಪ್ರದೇಶ ಆರ್ಥಿಕವಾದಲ್ಲಿ ವಿಕಸಿತ ಭಾರತ ಸಾಧ್ಯ
ನಾರಾಯಣ ಗುರುಗಳ ಸಂದೇಶದಂತೆ ಸಂಸ್ಥೆ ಮುನ್ಮಡೆಯುತ್ತಿದೆ. ಗ್ರಾಮೀಣ ಪ್ರದೇಶ ಆರ್ಥಿಕವಾದಲ್ಲಿ ವಿಕಸಿತ ಭಾರತ ಸಾಧ್ಯ. ಕನಸಿಲ್ಲದೆ ಸಂಸ್ಥೆ ಕಟ್ಟಲು ಸಾಧ್ಯವಿಲ್ಲ. ಹತ್ತು ‌ಮಂದಿಗೆ ಬದುಕು ಕೊಡುವ ಕೆಲಸ ಸಂಸ್ಥೆಯಿಂದಾಗುತ್ತಿದೆ ಎನ್ನಲು ಸಂತಸವಾಗುತ್ತಿದೆ. ಎಲ್ಲರ ಸಹಕಾರದಿಂದ ಸಂಸ್ಥೆಯ ಬೆಳವಣಿಗೆ ಸಾದಸ್ಯವಾಗಿದೆ. ಸಮಾಜ ಹಾಗೂ ದೇಶಕ್ಕೆ ಆಸ್ತಿಯಾಗುವ ಕೆಲಸ ಪ್ರತಿಯೊಬ್ಬರಿಂದ ಅಗಲಿದೆ.ಈ ಸಹಕಾರಿಯು ಸಾಕಷ್ಟು ಮಂದಿಗೆ ಸ್ವಾಭಿಮಾನದ ಬದುಕನ್ನು ಕಟ್ಟಲು ಸಹಕಾರಿಯಾಗಿದ್ದು, ಗ್ರಾಹಕರೇದೇವರು ಎಂಬುದು ನಮ್ಮ ನಂಬಿಕೆಯಾಗಿದೆ. ಎಲ್ಲರ ಸಹಕಾರದಿಂದಾಗಿ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ನಮ್ಮ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ.
ಕೆ. ಹರಿಕೃಷ್ಣ ಬಂಟ್ವಾಳ
ಅಧ್ಯಕ್ಷರು

LEAVE A REPLY

Please enter your comment!
Please enter your name here