








ಮಂಗಳೂರು: ಕಲಾರ್ಪಣ ಟ್ರಸ್ಟ್ (ರಿ.) ಧಾರವಾಡ ವತಿಯಿಂದ ‘ಕಲಾಯಾನ -2026’ರಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಭಾನುವಾರ ಧಾರವಾಡ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆಯಿತು.



ಈ ಕಾರ್ಯಕ್ರಮದಲ್ಲಿ ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯ ಗುರು ಶಾಲಿನಿ ಆತ್ಮಭೂಷಣ ಅವರ ಶಿಷ್ಯೆಯರಾದ ಭಾರತಿ ಎಂ. ಹಾಗೂ ಶಮಾ ಎಸ್.ಪಿ., ಹಾಗೂ ಗೀತಾಂಜಲಿ ಕಲಾ ಕೇಂದ್ರ ಸಾಗರದ ಡಾ. ವಿಜಯಲಕ್ಷ್ಮಿ ಹೆಗಡೆ ಅವರ ಶಿಷ್ಯೆ ಚಂದನಾ ಎಸ್.ಎಂ. ಅವರು ಭರತನಾಟ್ಯ ಪ್ರದರ್ಶನ ನೀಡಿದರು.ಇದೇ ಸಂದರ್ಭದಲ್ಲಿ ಕಲಾರ್ಪಣದ ಪ್ರತಿಭಾವಂತ ಮಕ್ಕಳಿಂದ ನೃತ್ಯ ಪ್ರದರ್ಶನ ಏರ್ಪಟ್ಟಿತು.




ಕಾರ್ಯಕ್ರಮದಲ್ಲಿ ಸಕಾರ ಕಲ್ಚರಲ್ ಫೌಂಡೇಶನ್ (ರಿ.), ಧಾರವಾಡದ ಅಧ್ಯಕ್ಷೆ ಡಾ. ಶುಭದಾ ಸಿ. ಹಾಗೂ ಸಾಕೇತ್ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ನಿರ್ದೇಶಕಿ ವಿದುಷಿ ಸೀಮಾ ಕುಲಕರ್ಣಿ ಅತಿಥಿಗಳಾಗಿ ಶುಭ ಹಾರೈಸಿದರು. ಕಲಾರ್ಪಣದ ನಿರ್ದೇಶಕಿ ಸವಿತಾ ಹೆಗಡೆ ಸ್ವಾಗತಿಸಿ, ವಂದಿಸಿದರು.










