







ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂಘದ ನೂತನ ಸಮಿತಿಯ ರಚನೆ ಇತ್ತೀಚೆಗೆ ನಡೆಯಿತು.
ಸಂಘ ಗೌರವಾಧ್ಯಕ್ಷರನ್ನಾಗಿ ನಾರಾಯಣ ಮನೋಳಿತ್ತಾಯ ಕಾಜಿಮೂಲೆ ಯವರನ್ನು ಮರು ಆಯ್ಕೆ ಮಾಡಿ ಮುಂದುವರಿಸಲಾಯಿತು. ಅಧ್ಯಕ್ಷರಾಗಿ ಈ ಹಿಂದೆ ಭಜನಾ ಮಂದಿರ ಪುನರ್‌ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿದ್ದ, ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಸಿಇಒ ಜಯಪ್ರಕಾಶ್ ರೈ ಚೆಲ್ಯಡ್ಕ ರವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ದಯಾನಂದ ವಿನಾಯಕ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಭಜನಾ ಮಂದಿರ ಪುನರ್‌ನಿರ್ಮಾಣ ಸಮಿತಿಯ ಕೋಶಾಧಿಕಾರಿಯಾಗಿದ್ದ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ನಿವೃತ್ತ ಹಿರಿಯ ಗುಮಾಸ್ತ ಲಿಂಗಪ್ಪ ಗೌಡ ಕಕ್ಕೂರು, ಕೋಶಾಧಿಕಾರಿಯಾಗಿ ಸನತ್ ಕುಮಾರ್ ರೈ ಕುಂಜಾಡಿ, ಜೊತೆ ಕಾರ್ಯದರ್ಶಿಯಾಗಿ ಶೇಖರ ಗೌಡ ಮಿತ್ತಡ್ಕರವರನ್ನು ಆಯ್ಕೆ ಮಾಡಲಾಯಿತು.
ಆಡಳಿತ ಮಂಡಳಿಯ ಸದಸ್ಯರಾಗಿ ಕೃಷ್ಣಪ್ಪ ಕುಲಾಲ್ ಉಡ್ಡಂಗಲ, ಲಿಂಗಪ್ಪಗೌಡ ಪಂಬೆಜಾಲು, ಕುಟ್ಟಿ ವಿನಾಯಕ ನಗರ, ರಕ್ಷಣ್ ಬೇಂಗತಡ್ಕ, ದಿನೇಶ್ ಪಂಬೆಜಾಲ್, ಮಣಿಕಂಠ ತಲಪ್ಪಾಡಿ, ಕಿರಣ್ ರಾಜ್ ಕಕ್ಕೂರು, ವಾರಿಜಾ ಗಂಗಾಧರ ಗೌಡ ಪಂಬೆಜಾಲು, ಜನಿತಾ ಕಕ್ಕೂರು, ರಮಣಿ ಕಕ್ಕೂರು ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರು, ಪ್ರ. ಕಾರ್ಯದರ್ಶಿ ಗಣೇಶ್ ಪಂಬೆಜಾಲು, ನಿತ್ಯದೀಪ ಕರ್ಮಿ ಕೊರಗಪ್ಪ ವಿನಾಯಕ ನಗರ, ವಾರದ ಭಜನಾ ದಿನದ ಪೂಜಾ ಕರ್ಮಿಗಳಾದ ಹಿರಿಯರಾದ ಶಾಂತಪ್ಪ ಗೌಡ ಪಂಬೆಜಾಲು, ಜಯರಾಮ ಗಾಂಬೀರ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.












