







ಪುತ್ತೂರು:ಕೇಪುಳು ರಸ್ತೆ ಬದಿಯಲ್ಲಿ ಮನೆಯ ಎದುರೇ ರಾತ್ರೋರಾತ್ರಿ ಅಕ್ರಮವಾಗಿ ಗೂಡಂಗಡಿ ನಿರ್ಮಿಸಲಾಗಿದೆ ಎಂದು ನಗರಸಭೆಗೆ ದೂರು ನೀಡಲಾಗಿದೆ.


ಕೇಪುಳು ಜಂಕ್ಷನ್ ನಿವಾಸಿ ಮೊಹಮ್ಮದ್ ಶಾಫಿ ಅವರ ಮನೆಯ ಎದುರು ಭಾಗದಲ್ಲಿ ಉಮ್ಮರ್ ಎಂಬವರು ಅಕ್ರಮವಾಗಿ ಗೂಡಂಗಡಿ ನಿರ್ಮಿಸಿ ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಈ ಗೂಡಂಗಡಿಯಿಂದ ಮನೆಯ ವಾಸ್ತವ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು, ತಿರುವು ರಸ್ತೆಯಲ್ಲಿರುವುದರಿಂದ ಅಪಘಾತದ ಸಾಧ್ಯತೆಯೂ ಹೆಚ್ಚಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.













