







ಪುತ್ತೂರು; ಕೊಂಬೆಟ್ಟು ಮನೆಯೊಂದರಲ್ಲಿ ಬೆಳ್ಳಿಯ ಸಾಮಾಗ್ರಿ ಕಳವಾದ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೊಂಬೆಟ್ಟು ನಿವಾಸಿ ಸವಿತಾ ಎಂಬವರ ಮನೆಯಿಂದ ಬೆಳ್ಳಿಯ ಸಾಮಾಗ್ರಿ ಕಳವಾಗಿದ್ದು ಅವರು ಆ.29ರಂದು ಮನೆಗೆ ಬೀಗ ಹಾಕಿ ಉಜಿರೆಗೆ ಹೋಗಿದ್ದರು. ಸೆ.25ರಂದು ಸಂಬಂಧಿಕರು ಮನೆಯ ಬಾಗಿಲು ತೆರೆದಿರುವುದು ಕಂಡು ಸವಿತಾ ಅವರಿಗೆ ಮಾಹಿತಿ ನೀಡಿದರು. ಬಳಿಕ ಅವರು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ಬೆಳ್ಳಿಯ ದೀಪ, ಚೆಂಬು ಸೇರಿದಂತೆ ಸುಮಾರು 1.50ಲಕ್ಷ ಮೌಲ್ಯದ ಬೆಳ್ಳಿಯ ಸಾಮಾಗ್ರಿ ಕಳವಾಗಿದ್ದು ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













