ನೆಲ್ಯಾಡಿ: ದಿ| ಜಯಾನಂದ ಬಂಟ್ರಿಯಾಲ್‌ಗೆ ಯಕ್ಷಗಾನ ತಾಳಮದ್ದಳೆಯ ಮೂಲಕ ನುಡಿನಮನ

0

ನೆಲ್ಯಾಡಿ: ಆ.15ರಂದು ನಿಧನರಾದ ವಿವಿಧ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಸಮಾಜ ಸೇವಕ, ಯಕ್ಷಗಾನ ಸಂಘಟಕ, ನೆಲ್ಯಾಡಿ ಕೆಳಗಿನಪರಾರಿ ನಿವಾಸಿ ಜಯಾನಂದ ಬಂಟ್ರಿಯಾಲ್ ಅವರಿಗೆ ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘ ನೆಲ್ಯಾಡಿ ಇವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆಯ ಮೂಲಕ ನುಡಿ ನಮನ ಕಾರ್ಯಕ್ರಮ ದಿ.ಜಯಾನಂದ ಬಂಟ್ರಿಯಾಲ್‌ರವರ ಕೆಳಗಿನ ಪರಾರಿ ಶಿವಮೀನ ನಿಲಯದಲ್ಲಿ ಸೆ.27ರಂದು ನಡೆಯಿತು.


‘ ಶ್ರೀರಾಮ ನಿರ್ಯಾಣ’ ಎಂಬ ಕಥಾ ಭಾಗವನ್ನು ಪ್ರಸ್ತುತ ಪಡಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮಿ ನಾರಾಯಣ ಶೆಟ್ಟಿ ಕುಂಡಡ್ಕ, ಚೆಂಡೆಮದ್ದಳೆಯಲ್ಲಿ ಮೋಹನ್ ಶರವೂರು, ಅನುರಾಗ್ ಕೊಕ್ಕಡ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮನಾಗಿ ಗುಡ್ಡಪ್ಪ ಗೌಡ ಬಲ್ಯ, ಲಕ್ಷ್ಮಣನಾಗಿ ತಿಮ್ಮಪ್ಪ ಗೌಡ ಮಂಗಳೂರು, ಕಾಲಪುರುಷನಾಗಿ ರವಿ ಭಟ್ ಕೆಮ್ಮಣ್ಣಮಕ್ಕಿ, ದೂರ್ವಾಸ ಮುನಿಯಾಗಿ ವಿಶ್ವನಾಥ್ ಪದ್ಮುಂಜ, ಹನುಮಂತನಾಗಿ ಚಿನ್ಮಯಿ ಶೆಟ್ಟಿ ದೋಂತಿಲ ಸಹಕರಿಸಿದರು. ನಂತರ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರು, ಯಕ್ಷಗಾನ ಅರ್ಥದಾರಿ ಗುಡ್ಡಪ್ಪ ಗೌಡ ಬಲ್ಯ ಅವರು ದಿ| ಜಯಾನಂದ ಬಂಟ್ರಿಯಾಲ್‌ರವರ ಸಮಾಜಸೇವೆಯ ಬಗ್ಗೆ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಅನನ್ಯ ಕೊಡುಗೆಗಳ ಬಗ್ಗೆ ತಿಳಿಸಿ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕಡಬ ಉಪತಹಶೀಲ್ದಾರ್ ಗೋಪಾಲ ಕೆ., ಕಡಬ ತಾಲೂಕು ಜನ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಕೆ.ಸವಣೂರು, ಸದಸ್ಯ ತುಕಾರಾಮ ರೈ ಹೊಸಮನೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾಕರ್ ರೈ, ನಿರ್ದೇಶಕ ಭಾಸ್ಕರ್ ರೈ ತೋಟ, ಕಡಬ ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ಆನಂದ ಅಜಿಲ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ನಿವೃತ್ತ ಎಎಸ್‌ಐ ಚೆನ್ನಪ್ಪ ಗೌಡ ಹೊಸಮನೆ, ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ಸುಂದರ ಶೆಟ್ಟಿ ಪುರ, ಕೋಶಾಧಿಕಾರಿ ಪ್ರವೀಣ್ ಭಂಡಾರಿ ಪುರ, ಅಶ್ವಮೇಧ ಕ್ಯಾಟರಿಂಗ್ ಸರ್ವಿಸ್‌ನ ಮಾಲಕ ರತ್ನಾಕರ್ ಶೆಟ್ಟಿ ಕೊಲ್ಯೋಟು, ಜಯರಾಮ ಶೆಟ್ಟಿ ಗೌರಿಜಾಲು, ಪುರಂದರ ಶೆಟ್ಟಿ ನೆತ್ತರ, ರತ್ನಾಕರ ಬಂಟ್ರಿಯಾಲ್, ಮೋಹನದಾಸ ಬಂಟ್ರಿಯಾಲ್, ಸದಾನಂದ ಶೆಟ್ಟಿ ನಡುಪರಾರಿ, ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘದ ಸದಸ್ಯರಾದ ಸಂಧ್ಯಾ ಸುರೇಶ್ ಶೆಟ್ಟಿ ಪಟ್ಟೆ, ಸುಲತಾ ಮೋಹನ್, ನವ್ಯ ಪ್ರಸಾದ್ ಅಣ್ಣುಗುಂಡಿ, ಚಿನ್ಮಯಿ ಶೆಟ್ಟಿ ದೋಂತಿಲ, ಭೂಮಿಕ ಶೆಟ್ಟಿ ದೋಂತಿಲ, ಪೃಥ್ವಿ ಎಸ್. ಶೆಟ್ಟಿ, ನಿಖಿತ ಎನ್.ಶೆಟ್ಟಿ, ದಿ| ಜಯಾನಂದ ಬಂಟ್ರಿಯಾಲ್‌ರವರ ಮನೆಯವರಾದ ಸುಚಿತ್ರಾ ಬಂಟ್ರಿಯಾಲ್. ವೈಷ್ಣವಿ ಬಂಟ್ರಿಯಾಲ್ ಮತ್ತು ಕುಟುಂಬಸ್ಥರು ಹಿತೈಷಿಗಳು, ಬಂಧುಗಳು ಉಪಸ್ಥಿತರಿದ್ದರು. ವಿನ್ಯಾಸ್ ಬಂಟ್ರಿಯಾಲ್ ಸ್ವಾಗತಿಸಿ, ಮಹಾಬಲ ಶೆಟ್ಟಿ ದೋಂತಿಲ ವಂದಿಸಿದರು.

LEAVE A REPLY

Please enter your comment!
Please enter your name here