ಎ.ವಿ.ಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ

0

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆಯು ಸೆ.29ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಿತು.

ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ದಂಪತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ನಿರ್ದೇಶಕರಾದ ಎ.ವಿ.ನಾರಾಯಣ, ಗುಡ್ಪಪ್ಪ ಗೌಡ ಬಲ್ಯ, ಸೀತಾರಾಮ ಕೇವಳ, ಗಂಗಯ್ಯ ಗೌಡ ತಾಳಿಪಡ್ಪು, ಜಯಪ್ರಕಾಶ್ ಕಳುವಾಜೆ, ಎಚ್.ಸುಂದರ ಗೌಡ, ಪದ್ಮಪ್ಪ ಗೌಡ ಕೆ, ಕೆ.ಮಾಧವ ಗೌಡ ಪೆರಿಯತ್ತೋಡಿ, ಮೋಹನ ಜಿ, ವೇದಾವತಿ ಶೀನಪ್ಪ ಗೌಡ ಬೈತ್ತಡ್ಕ, ಉಷಾಲಕ್ಷ್ಮೀ ಉಮೇಶ್ ಗೌಡ, ಪ್ರಬಂಧಕ ತೇಜ್ ಕುಮಾರ್ ಎನ್ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಸಹಿತ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.


ಸ್ಥಾಪನಾ ದಿನಾಚರಣೆಯಂಗವಾಗಿ ಠೇವಣಾತಿ ಮೇಲೆ ವಿಶೇಷ ಬಡ್ಡಿ
ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಠೇವಾಣಿಯ ಮೇಲೆ ಶೇ.0.50 ಬಡ್ಡಿ ದರ ಯೋಜನೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಘೊಷಣೆ ಮಾಡಿದರು. ಈ ಅವಕಾಶ ಮಾರ್ಚ್ ಅಂತ್ಯದ ತನಕ ಇರಲಿದೆ ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here