ಪುಣ್ಚತ್ತಾರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಅಭಿನಂದನೆ ಸಭೆ – ಲೆಕ್ಕಪತ್ರ ಮಂಡನೆ

0

ಕಾಣಿಯೂರು: ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ವೈಭವದಿಂದ ಯಶಸ್ವಿಯಾಗಿ 9ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ನಡೆದಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಲೆಕ್ಕಪತ್ರ ಮಂಡನೆ ಸಭೆಯು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದಲ್ಲಿ ನಡೆಯಿತು.

ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಮಾಳ ಅಧ್ಯಕ್ಷತೆ ವಹಿಸಿದ್ದರು. ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ ಅಭಿನಂದನೆ ಸಲ್ಲಿಸಿದ್ದರು. ಶ್ರೀ ಹರಿ ಭಜನಾ ಮಂಡಳಿ ಪ್ರಧಾನ ಕಾರ್ಯದರ್ಶಿ ದಿನೇಶ್ ಮಾಳ ಅನಿಸಿಕೆ ವ್ಯಕ್ತಪಡಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ ಸ್ವಾಗತಿಸಿ ಲೆಕ್ಕಪತ್ರ ವಾಚಿಸಿದರು.

ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಕೋಶಾಧಿಕಾರಿ ನೇಮಿರಾಜ್ ಕಡೀರ, ಜತೆ ಕಾರ್ಯದರ್ಶಿಗಳಾದ ದಿನೇಶ್ ಪೈಕ, ರವಿಶಂಕರ್ ಎನ್.ಟಿ, ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ಕಟೀಲ್, ಮಿಥುನ್ ಪೈಕ, ಮಾಧವ ಕಲ್ಪಡ, ಅಶ್ವಿನ್ ಕರಿಮಜಲು, ರಾಧಾಕೃಷ್ಣ ಪೈಕ, ಅನಂತ ಕುಮಾರ್ ಬೈಲಂಗಡಿ, ಭವಿಷ್ ಕರಿಮಜಲು, ಪ್ರಶಾಂತ್ ಪೈಕ, ರಂಜಿತ್ ಬಿರ್ನೆಲು, ರಾಕೇಶ್ ಕರಿಮಜಲು, ಧರ್ಮಪಾಲ ಅನುವುಗುಡ್ಡೆ, ಶಿವಪ್ಪ ಬಂಡಾಜೆ, ಶ್ರೀಧರ್ ಬೈಲಂಗಡಿ, ರಾಧಾಕೃಷ್ಣ ಕಾರಡ್ಕ, ಪುನೀತ್ ಅಬ್ಬಡ, ವಿನ್ಯಾಸ್ ಅಬ್ಬಡ, ಸತ್ಯಾನಂದ ನಾವೂರು, ಉಮೇಶ್ ಪೈಕ, ಗಿರೀಶ್ ಬೀಜತ್ತಡ್ಕ, ಮೋಹನ್ ಕರಿಮಜಲು, ಪ್ರಶಾಂತ್ ಬಾರೆತ್ತಡಿ, ದಿನೇಶ್ ಕರಿಮಜಲು, ರಂಜಿತ್ ನಳಿಯಾರು, ಗಿರೀಶ್ ಬಿ, ಉಮೇಶ್ ಪೈಕ, ಕಮಲಾಕ್ಷ ಕಡಿರ, ಅಭಿಲಾಷ್ ಬೀಜತ್ತಡ್ಕ, ಉಮೇಶ್ ಬಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here