ರೋಟರಿ ಈಸ್ಟ್ ನಿಂದ ಜಿಲ್ಲಾ ಕಾರ್ಯಕ್ರಮ ರೆಹ್ಲಾ 2026

0

ಪುತ್ತೂರು: ರೋಟರಿ ಜಿಲ್ಲೆ 3181ಇದರ ಜಿಲ್ಲಾ ಕಾರ್ಯಕ್ರಮಗಳೆಲ್ಲೊಂದಾದ ರೆಹ್ಲಾ 2026 ಕಾರ್ಯಕ್ರಮವು ಪುತ್ತೂರಿನ ಮರೀಲು ಪುತ್ತೂರು ಕ್ಲಬ್ ಸಭಾಂಗಣದಲ್ಲಿ ಸೆ.27 ರಂದು ಜರಗಿತು. 

ರೋಟರಿ ಜಿಲ್ಲಾ ಗವರ್ನರ್  ಸತೀಶ್ ಬೋಳಾರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರೋಟರಿಯು ಯುವ ನಾಯಕರಿಗೆ ನಾಯಕತ್ವ, ವ್ಯಕ್ತಿತ್ವ ವಿಕಸನ ,ಇನ್ನಿತರ ವಿಷಯಗಳ ಬಗೆಗಿನ ವಿಶೇಷ ಕಾರ್ಯಗಾರ ಇದಾಗಿದ್ದು ರೋಟರಿ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿ, ಪಿಡಿಜಿ ಮಾಧವ ಚಂದ್ರನ್, ಪಿಡಿಜಿ ಪ್ರೊ|ಎಲಿಜಬೆತ್ ಚರಿಯನ್ ಹಾಗೂ ಗೌರವ ಉಪಸ್ಥಿತಿಯಾಗಿ ಪಿಡಿಜಿ ರಾಮಕೃಷ್ಣ ಪಿ.ಕೆ ,ಡಿಜಿಈ  ಯಶಸ್ವಿ ಎಸ್ ಸೋಮಶೇಖರ್, ಡಿಜಿಎನ್ ಡಾ. ಸೂರ್ಯನಾರಾಯಣ ಕುಕ್ಕಾಡಿ, ಪಿಡಿಜಿ ಆರ್.ಎಸ್ ನಾಗಾರ್ಜುನ ಉಪಸ್ಥಿತರಿದ್ದರು. 

ಕಾರ್ಯಾಗಾರ:

ಸಭಾ ಕಾರ್ಯಕ್ರಮದ ಬಳಿಕ ಪಿಡಿಜಿ ಮಾಧವ ಚಂದ್ರನ್ ರವರು ಕ್ರಿಯೇಟ್ ಏ ಲೆಗಸಿ ವಿಥ್ ಇಂಪ್ಯಾಕ್ಟ್ ಫುಲ್ ಪ್ರಾಜೆಕ್ಟ್ಸ್ ಈ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು ಮುಂದಕ್ಕೆ ರೋಲ್ಸ್ ಅಂಡ್ ರೆಸ್ಪಾನ್ಸ್ಬಿಲಿಟಿ ಆಫ್  ಏ ಲೀಡರ್ ಆಫ್ಟರ್ ಬಿಕಮಿಂಗೆ ಕ್ಲಬ್ ಪ್ರೆಸಿಡೆಂಟ್ ಈ ವಿಷಯದ ಕುರಿತು ಪಿಡಿಜಿ ಆರ್ ಎಸ್ ನಾಗಾರ್ಜುನ್ ರವರು, ರೋಲ್ ಆಫ್ ಏ ಲೀಡರ್ ಇನ್ ಅನೆನ್ಸಿಂಗ್ ಟಿ ಆರ್ ಎಫ್ ಪ್ರೋಗ್ರಾಮ್ ಈ ವಿಷಯದ ಕುರಿತು ಪಿಡಿಜಿ ರಾಮಕೃಷ್ಣ ಪಿ.ಕೆರವರು, ಸ್ಟೋರಿ ಟೆಲ್ಲಿಂಗ್  ಟು ಅಂಪ್ಲಿಫೈ ಅಂಡ್ ಕ್ರಿಯೇಟ್ ಇಂಪ್ಯಾಕ್ಟ್ ಇನ್ ರೋಟರಿ ವಿಷಯದ ಕುರಿತು ಪಿಡಿಜಿ ಡಾ.ದೇವದಾಸ ರೈ,  ಅಪ್ಡೇಟ್ ಅಂಡ್ ಅಪ್ಗ್ರೇಡ್ ಈ ವಿಷಯದ ಕುರಿತು ಪಿಡಿಜಿ ಪ್ರೊ| ಎಲಿಜಬೆತ್ ಚೇರಿಯನ್,  ಟುಗೆದರ್ ವೀ ಲೀಡ್ ವಿಷಯದ ಕುರಿತು ಡಿಜಿಈ  ಯಶಸ್ವಿ ಸೋಮಶೇಖರ್, ಯೂಸ್ ಆಫ್ ಟೆಕ್ನಾಲಜಿ ಫಾರ್ ಎಫೆಕ್ಟಿವ್ ಲೀಡರ್ಶಿಪ್ ಈ ವಿಷಯದ ಕುರಿತು ಪಿಪಿ ಸುಜಾತ ಮಾಧವ ಚಂದ್ರನ್, ಪಾಸ್ಟ್, ಪ್ರಸೆಂಟ್ , ಫ್ಯೂಚರ್ ಆಫ್ ರೋಟರಿ ಈ ವಿಷಯದ ಕುರಿತು ಪಿಡಿಜಿ ಡಾ. ಭಾಸ್ಕರ್ ಎಸ್,  ಡಿಜಿಎನ್ ಡಾ. ಸೂರ್ಯನಾರಾಯಣ ಕುಕ್ಕಾಡಿರವರು ಎಫೆಕ್ಟಿವ್ ಅಡ್ಮಿನಿಸ್ಟ್ರೇಟಿವ್ ಫಾರ್ ರನ್ನಿಂಗ್ ಕ್ಲಬ್ ಡೇ ಟು ಡೇ ಆಕ್ಟಿವಿಟೀಸ್ ವಿಷಯದ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ಸಮಾರೋಪ:

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹಾಗೂ ಜಿಲ್ಲಾ ಸೆಕ್ರೆಟರಿ ಅಡ್ಮಿನ್  ಗೋಪಾಲಕೃಷ್ಣ ಶೆಟ್ಟಿ ಮತ್ತು ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ರೋಟರಿ ಸದಸ್ಯರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಇವೆಂಟ್ ಕೋರ್ಡಿನೇಟರ್ ಅಂಡ್ ಅಸಿಸ್ಟೆಂಟ್ ಗವರ್ನರ್ ಝೇವಿಯರ್ ಡಿ’ಸೋಜ, ಅಸಿಸ್ಟೆಂಟ್ ಗವರ್ನರ್ ಆನಂದ್ ಖಂಡಿಗ, ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಜಾಕ್ ಕಬಕಕಾರ್ಸ್ , ಇವೆಂಟ್ ಚೇರ್ಮನ್ ಡಾ. ಶ್ಯಾಮ್ ಪ್ರಸಾದ್, ಇವೆಂಟ್ ಸೆಕ್ರೆಟರಿ ಶಶಿಧರ್ ಕಿನ್ನಿಮಜಲು, ಕ್ಲಬ್ ಸೆಕ್ರೆಟರಿ ಜಯಂತ್ ಬಾಯಾರ್, ಕ್ಲಬ್ ಕೋಶಾಧಿಕಾರಿ ಪ್ರಕಾಶ್ ಕುಮಾರ್ ರೈ  ಅಲ್ಲದೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಮಾಜಿ ಅಧ್ಯಕ್ಷರುಗಳು ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಅಕ್ಷಯ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಹ್ಲಾ ಡಿಸ್ಟ್ರಿಕ್ಟ್ ಚೇರ್ಮನ್ ಜಯಂತ್ ನಡುಬೈಲು ಸ್ವಾಗತಿಸಿ, ರೋಟರಿ ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ ಕೆದಂಬಾಡಿ ಮಠ ವಂದಿಸಿದರು. ಅಕ್ಷಯ ಕಾಲೇಜಿನ ಶಿಕ್ಷಕಿ ರಮ್ಯಾ ರವರು ನಿರೂಪಿಸಿದರು‌.

 ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹೀಗೆ 120ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here