







ಪುತ್ತೂರು: ಬೊಳುವಾರು ಸುರ್ಯಪ್ರಭಾ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕೀರ್ತನಾ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.6ರಂದು ಕೇಂದ್ರ ಕಚೇರಿಯ ವಠಾರದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಡಾ| ಶ್ರೀಪತಿ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ವರ್ಷಾಂತ್ಯಕ್ಕೆ 660 ಸದಸ್ಯರನ್ನು ಹೊಂದಿದ್ದು, ರೂ.1,84,31,872.30 ದುಡಿಯುವ ಬಂಡವಾಳ ಹೊಂದಿದೆ, ವರ್ಷಾಂತ್ಯಕ್ಕೆ ರೂ.1,53,70,000.22 ವಿವಿಧ ರೀತಿಯ ಠೇವಣಿಗಳನ್ನು ಹೊಂದಿದೆ. ರೂ.1,26,81,454 ಸಾಲ ಪಾವತಿಸಲಾಗಿದೆ, ವರ್ಷದಲ್ಲಿ 14,58,329.63 ಲಾಭ ಗಳಿಸಿದ್ದು ಸದಸ್ಯರಿಗೆ 8% ಡಿವಿಡೆಂಡ್ ನೀಡಲಾಗುವುದೆಂದು ಘೋಷಿಸಿದರು.



ಸಂಘದ ನಿರ್ದೇಶಕ ವಸಂತ ಕಾಮತ್ ಕೆ., ಉಪಾಧ್ಯಕ್ಷ ಪ್ರಸನ್ನ ಕುಮಾರ್ ಕೆ.ಆರ್., ಗೋವಿಂದ ನಾಯಕ್ ಎಸ್.ಎಲ್., ಉದಯ್ ಕುಮಾರ್, ವಿರೂಪಾಕ್ಷ ಭಟ್, ಮುರಳಿಶ್ಯಾಮ್, ದಿವಾಕರ ಬಲ್ಲಾಳ್, ದೀಪಾ ನಾಯಕ್, ವೀಣಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯೆ ಯಶೋಧ ಬಿ. ಪ್ರಾರ್ಥಿಸಿದರು. ಉಪಾಧ್ಯಕ್ಷ ಪ್ರಸನ್ನ ಕುಮಾರ್ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಿವ್ಯ ಸಂತೋಷ್ ರೈ ಸಂಘದ ವರದಿ, ಆಯವ್ಯಯ ಮಂಡಿಸಿದರು. ಸಿಬ್ಬಂದಿ ಅರ್ಪಿತಾ ಎನ್.ಬಿ., ಪಿಗ್ಮಿ ಸಂಗ್ರಹಕರಾದ ಕಿಶೋರ್ ಭಟ್, ಮನೋರಮ ಬಿ., ಹರೀಶ್‌ಕುಮಾರ್ ಎನ್. ಸಹಕರಿಸಿದರು. ನಿರ್ದೇಶಕರಾದ ಮುರಳಿ ಶ್ಯಾಮ ಧನ್ಯವಾದಗೈದರು.










