







ಪುತ್ತೂರು: ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ಕನ್ನಡ ಪ್ರಭ' ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್’ನ ವತಿಯಿಂದ ನೀಡುವ ಪ್ರತಿಷ್ಠಿತ `ಆಯುರ್ಭೂಷಣ’ ಪ್ರಶಸ್ತಿಗೆ ಭಾಜನರಾಗಿ ಇತ್ತೀಚೆಗೆ ಪ್ರಶಸ್ತಿಯನ್ನು ಸ್ವೀಕರಿಸಿದ ಜನಪ್ರಿಯ ಆಯುರ್ವೇದ ವೈದ್ಯ, ಉದ್ಯಮಿ ಹಾಗೂ ಕಲಾಪೋಷಕರಾಗಿರುವ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ಆಡಳಿತ ನಿರ್ದೇಶಕರು ಮತ್ತು ಪುತ್ತೂರು ದೀಪೋತ್ಸವ ಸಮಿತಿ ಉಪಾಧ್ಯಕ್ಷರೂ ಆಗಿರುವ ಡಾ. ಹರಿಕೃಷ್ಣ ಪಾಣಾಜೆ ಅವರನ್ನು ಪುತ್ತೂರು ದೀಪೋತ್ಸವ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಪಾರಂಪರಿಕ ಜ್ಞಾನವನ್ನು ಉಳಿಸಿ ಬೆಳೆಸುವುದರ ಜೊತೆಗೆ, ಔಷಧ ಸಂಶೋಧನೆ, ಉತ್ಪಾದನೆ, ಉದ್ಯಮಶೀಲತೆ, ಸಾರ್ವಜನಿಕ ಸೇವೆ ಹಾಗೂ ಕಲೆ-ಸಂಸ್ಕೃತಿಯ ಪೋಷಣೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಡಾ. ಹರಿಕೃಷ್ಣ ಪಾಣಾಜೆ ಅವರನ್ನು ಪುತ್ತೂರು ದೀಪೋತ್ಸವ ಸಮಿತಿ ಗೌರವಾಧ್ಯಕ್ಷ ಸ್ವರ್ಣೋದ್ಯಮಿ ಜಿ.ಎಲ.ಬಲರಾಮ ಅಚಾರ್ಯ ಅವರು ಶಲ್ಯ ಹೊದಿಸಿ ಸನ್ಮಾನಿಸಿದರು. ಸಮಿತಿ ಅಧ್ಯಕ್ಷ ಸಾಮಾಜಿಕ ದುರೀಣ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅವರು ಪೇಟ ತೊಡಿಸಿ ಗೌರವಿಸಿದರು.



ಉಪಾಧ್ಯಕ್ಷ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ದೇರ್ಲ ಕರುಣಾಕರ ರೈ ಹಾರ ತೊಡಿಸಿ ಅಭಿನಂದಿಸಿರು. ಈ ಸಂದರ್ಭ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರವೀಶ್ ಪಡುಮಲೆ, ಸಂಚಾಲಕ ಸಂತೋಷ್ ರೈ, ಕೋಶಾಧಿಕಾರಿ ಯಸ್ ದಾಮೋದರ ಪಾಟಾಳಿ, ಜೊತೆ ಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ನಿರೀಕ್ಷೆಯಿಟ್ಟು ಮಾಡದ ಕಾರ್ಯಕ್ರಮ ಬೆಳೆಯಿತು
ಪ್ರಶಸ್ತಿಗೆ ಆಸಕ್ತಿವಹಿಸಿದವನಲ್ಲ. ಅದರೆ ಬಂದಿದೆ. ಹಿಂದಿನಿಂದಲೂ ಹೀಗೆ ಆಗಬೇಕೆಂದವನಲ್ಲ. ಕಲೋಪಸಾನದಲ್ಲೂ 22 ವರ್ಷಗಳ ಹಿಂದೆ ಗೃಹಪ್ರವೇಶಕ್ಕೆ ಸಂಗೀತ ಕಾರ್ಯಕ್ರಮ ಮಾಡಿದ್ದು, ಆಗ ಬಂದವರು ಸಂಗೀತ ಕಾರ್ಯಕ್ರಮವನ್ನೇ ಹೊಗಳಿದ್ದು ಹೊರತು ಊಟೋಪಚಾರವನ್ನಲ್ಲ. ಆಗ ನನಗೆ ಸಂಗೀತದ ಮೂಲಕ ಜನರಿಗೆ ಸಂತೋಷ ಕೊಡಲು ಇನ್ನೊಂದು ದಾರಿ ಇದೆ ಎಂದರ್ಥವಾಯಿತು. ಹಾಗೆ ವರ್ಷಕ್ಕೊಮ್ಮೆ ಸಾಂಸ್ಕೃತಿಕ ರಂಗವನ್ನು ಆರಂಭಿಸಿದೆ. ಅದು ನನ್ನನ್ನು ಗುರುತಿಸಿದೆ. ನಿರೀಕ್ಷೆಯಿಟ್ಟು ಮಾಡದ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೊಯಿತು. ಎಷ್ಟೋ ಎಷ್ಟೋ ಅದ್ಭುತ ಕಲಾವಿದರೂ ಇಲ್ಲಿ ತಮ್ಮ ಕಲಾಧಾರೆಯನ್ನು ಎರೆದಿರುವುದು ಸಂತೋಷದ ವಿಚಾರ.
ಡಾ. ಹರಿಕೃಷ್ಣ ಪಾಣಾಜೆ










