







ಪುತ್ತೂರು: ಶಿರಾಡಿ ಮಂಡಲ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಕುಂಞಣ್ಣ ಗೌಡ ಅವರ ಶ್ರದ್ದಾಂಜಲಿ ಕಾರ್ಯಕ್ರಮ ಸೆ.27ರಂದು ಪುತ್ತೂರು ಕಲ್ಲೇಗ ಭಾರತ್ ಮಾತ ಸಮುದಾಯ ಭವನದಲ್ಲಿ ನಡೆಯಿತು.


ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಅವರು ನುಡಿನಮನ ಸಲ್ಲಿಸಿದರು. ಕುಂಞಣ್ಣ ಗೌಡ ಅವರು ಗ್ರಾಮೀಣ ಭಾಗದಲ್ಲಿ ಜನಿಸಿ, ಆ ಭಾಗದ ಜನರ ಬದುಕನ್ನು ಕಟ್ಟಿಕೊಡುವಲ್ಲಿ ನೆರವನ್ನು ನೀಡಿ ಇವ ನಮ್ಮವ ಇವ ನಮ್ಮವ ಎಂಬ ಪ್ರೀತಿಯನ್ನು ಗಳಿಸಿದ ಗ್ರಾಮೀಣ ಭಾಗದ ಹೆಮ್ಮೆಯ ಪುತ್ರವಾಗಿ ಕಾಣಿಸಿಕೊಳ್ಳುತ್ತಾರೆ. ಕೂತ್ಕುಂಜ ಹಳ್ಳಿಯಲ್ಲಿ ತಮ್ಮ ಬದುಕನ್ನು ಆರಂಭಿಸಿ. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಜ್ಞಾನವೇ ಶಕ್ತಿ ಎಂದು ಮನಗಂಡು ಕಿಲೋಮಿಟರ್ ಗಟ್ಟಲೆ ನಡೆದು ವಿದ್ಯಾಭ್ಯಾಸ ಪಡೆದರು.



ಜ್ಞಾನದ ದಾಹ ಅವರಲ್ಲಿತ್ತು. ಅದನ್ನು ಕೊನೆಯ ತನಕ ಉಳಿಸಿ ಸಮಾಜಕ್ಕೆ ಬೆಳಕಗಾದರು ಎಂದರು. ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಕುಂಞಣ್ಣ ಗೌಡರ ಆತ್ಮಕ್ಕೆ ಚಿರಶಾಂತಿ ಕೋರಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು.
ಈ ಸಂದರ್ಭ ಕುಂಞಣ್ಣ ಗೌಡ ಅವರ ಪುತ್ರ ಪಿಡಬ್ಲ್ಯೂಡಿ ಸುಬ್ರಹ್ಮಣ್ಯ ವಿಶೇಷ ಉಪವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕೆ, ಪುತ್ರಿಯರಾದ ಭಾಗ್ಯಶ್ರೀ, ನಮಿತಾ, ಜ್ಯೋತಿ, ಸೊಸೆ ವಿಜಯಲಕ್ಷ್ಮೀ ಪಾಲ್ತಾಡು ಮನೆ, ಅಳಿಯಂದಿರಾದ ಲಕ್ಷ್ಮಣ ಬಾಲ್ಯಾಟನ ಮನೆ, ಯಶವಂತ ಮಾವಜಿ ಮನೆ, ನಿತ್ಯಾನಂದ ಬೈಲಾಡಿ ಮತ್ತು ಅನೇಕ ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.










