ಮೈಸೂರಿಗೆ ತೆರಳುವ ಕಂಬಳದ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿ : ಸ್ಥಳ ಪರಿಶೀಲನೆ

0


ಪುತ್ತೂರು: ಮೈಸೂರು ದಸರಾ ವಿಜಯ ದಶಮಿ ಜೋಡುಕರೆ ಕಂಬಳದಲ್ಲಿ ಭಾಗವಹಿಸುವ ಕಂಬಳದ ಕೋಣಗಳು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಅ.16ರಂದು ಮೆರವಣಿಗೆಯ ಮೂಲಕ ಹೊರಟು ಕುಶಾಲನಗರ ಸಂತೆ ಮೈದಾನದಲ್ಲಿ ವಿಶ್ರಾಂತಿ ಪಡೆಯಲಿದ್ದು, ಸಂತೆ ಮೈದಾನದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.


ಕುಶಾಲನಗರ ಸಂತೆ ಮೈದಾನದಲ್ಲಿ ಕಂಬಳ ಕೋಣಗಳಿಗೆ ವಿಶ್ರಾಂತಿ ಪಡೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದಲ್ಲದೆ ಸ್ಥಳಿಯ ಅಡಳಿತದ ಅಧಿಕಾರಿಗೆ ಸೂಚನೆಯನ್ನು ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ದಸರಾ ಕಂಬಳ ಸಮಿತಿಯ ಪದಾಧಿಕಾರಿಗಳಾದ ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ, ರಂಜೀತ್ ಬಂಗೇರಾ, ಗಿರೀಶ್ ರೈ ಮೂಲೆ ಉದ್ಯಮಿಗಳಾದ ಜಗದೀಶ್ ರೈ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here