ಸವಣೂರು ಪ್ರೇರಣಾ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ನಿಲಯಕ್ಕೆ ಜಿನಸು ಸಾಮಾಗ್ರಿ ಕೊಡುಗೆ

0

ಪುತ್ತೂರು: ಕಾನೂನು ಪ್ರಕೋಷ್ಟ ಸುಳ್ಯ ಮಂಡಲ ಮತ್ತು ಅಧಿವಕ್ತ ಪರಿಷತ್‌ ಸುಳ್ಯ ಘಟಕ ಇವುಗಳ ಆಶ್ರಯದಲ್ಲಿ ಸೆ.29ರಂದು ಪ್ರಧಾನಿ ನರೇಂದ್ರ ಮೋದಿಯವರ 25ನೇ ವರ್ಷದ ಆಡಳಿತ ಮತ್ತು ಅವರ ಜನ್ಮ ದಿನಾಚರಣೆಯ ಅಂಗವಾಗಿ ಸೇವಾ ಸಂಕಲ್ಪದ ಕಾರ್ಯಕ್ರಮದಲ್ಲಿ ಸವಣೂರು ಪ್ರೇರಣಾ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ನಿಲಯಕ್ಕೆ ಜಿನಸು ಸಾಮಾನುಗಳನ್ನು ನೀಡಲಾಯಿತು.

ಸುಳ್ಯ ಮಂಡಲದ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ರೈ ಮನವಳಿಕೆ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸಮಾಜದ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು. ಸುಳ್ಯ ಮಂಡಲದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ ಕೆ, ಅಧಿವಕ್ತ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಡಿ ಪಿ, ಸುಳ್ಯ ಅಧಿವಕ್ತ ಪರಿಷತ್‌ ನ ಅಧ್ಯಕ್ಷ ರಾದ ದಿಲೀಪ್‌ ಬಾಬ್ಲುಬೆಟ್ಟ, ಕಾನೂನು ಪ್ರಕೋಷ್ಟದ ಸುಳ್ಯ ಮಂಡಲದ ಪ್ರಭಾರಿ ಸಂದೀಪ್‌ ವಳಲಂಬೆ, ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷರಾದ ಗಿರಿಶಂಕರ ಸುಲಾಯ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ತಾರನಾಥ ಕಾಯರ್ಗರವರು ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ಮಂಡಲ ಕಾನೂನು ಪ್ರಕೋಷ್ಟದ ಸದಸ್ಯರಾದ ಹರೀಶ್‌ ಬೂಡುಪನ್ನೆ, ಹರ್ಷಿತ್‌ ಕರ್ಜ, ಎಸ್‌ ಟಿ ಮೋರ್ಚಾದ ಸುಳ್ಯ ಮಂಡಲದ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ, ಯುವ ಮೋರ್ಚಾದ ಕಾರ್ಯದರ್ಶಿಯಾದ ದಿವಾಕರ ಕುಂಬಾರ ಓಬಿಸಿ ಮೋರ್ಚಾದ ಕಾರ್ಯದರ್ಶಿ ಚಂದ್ರಾವತಿ ಸುಣ್ಣಾಜೆ,ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿಯ ನಿರ್ದೇಶಕರಾದ ಶ್ರೀಧರ ಸುಣ್ಣಾಜೆ, ನ್ಯಾಯವಾದಿಗಳಾದ ಪ್ರಕಾಶ್‌ ಎನ್‌ ಟಿ, ವಿಜಯ ಕೆ, ಸವಣೂರು ಭಾರತೀಯ ಜನತಾ ಪಾರ್ಟಿಯ ಬೂತ್ ಕಾರ್ಯದರ್ಶಿ ಸತೀಶ್‌ ಬಲ್ಯಾಯ, ಆಶ್ರಮದ ಮೇಲ್ವಿಚಾರಕರಾದ ಶೀಲಾವತಿ ಮೊದಲಾದವರು ಉಪಸ್ಥಿತರಿದ್ದರು. ಕಾನೂನು ಪ್ರಕೋಷ್ಟದ ಸಂಚಾಲಕರಾದ ಮಹೇಶ್‌ ಕೆ ಸವಣೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಸಂಚಾಲಕರಾದ ಸಂದೀಪ್‌ ಮುದುಗದ್ದೆ ವಂದಿಸಿದರು.

LEAVE A REPLY

Please enter your comment!
Please enter your name here