







ಕಾಣಿಯೂರು: ಪುತ್ತೂರಿನ ಜೋಸ್ ಆಲೂಕಾಸ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಕಾಣಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜನರೇಟರ್ ಮತ್ತು ಸ್ಮಾರ್ಟ್ ಟಿವಿ ಖರೀದಿಗಾಗಿ ರೂ.68 ಸಾವಿರ ಸಹಾಯಧನವನ್ನು ನೀಡಲಾಯಿತು.


ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ಸಂಸ್ಥೆಯ ಏರಿಯಾ ಮ್ಯಾನೇಜರ್ ಅಗಸ್ಟಿನ್, ಪುತ್ತೂರು ಶಾಖಾ ವ್ಯವಸ್ಥಾಪಕ ಹರಿ ಮರಾರ್, ಸಹಾಯಕ ವ್ಯವಸ್ಥಾಪಕ ಪ್ರಜೀಶ್ ಪ್ರಕಾಶ್ ಮತ್ತು ಅಕೌಂಟೆಂಟ್ ಇನೋಶ್ ಸನ್ನಿ ಅವರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಎಸ್ಡಿಎಂಸಿ ಸದಸ್ಯ ದಿನೇಶ್ ಅನ್ನಾಡಿ, ಚಂದ್ರಶೇಖರ ಕಟ್ಟತ್ತಾರು, ಗೌರಿ ಮತ್ತು ವಸಂತಿ ಅಜೀರಂಗಳ ಅವರಿಗೆ ಚೆಕ್ ಹಸ್ತಾಂತರಿಸಿದರು.













