ಬೆಂಗಳೂರು ತುಳುನಾಡ್ದ ಒಕ್ಕೂಟ ರಚನೆಗೆ ಪೂರ್ವಭಾವಿ ಸಭೆ; ನ.1ಕ್ಕೆ ಸಮಿತಿ ರಚನೆಗೆ ನಿರ್ಧಾರ

0

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ತುಳುವರ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ‘ತುಳುನಾಡ್ದ ಒಕ್ಕೂಟ’ ರಚಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯು ಸೆ.25ರಂದು ಬೆಂಗಳೂರಿನ ಸ್ವಾಗತ್ ಹೋಟೆಲ್ ಮೆಜೆಸ್ಟಿಕ್‌ನಲ್ಲಿ ನಡೆಯಿತು.

ಸಭೆಯಲ್ಲಿ ಇದುವರೆಗೆ ಒಗ್ಗೂಡಿರುವ ಎಲ್ಲಾ ಸಂಘಟನೆಗಳು ಸೇರಿ ಸಂಘಟನೆಯ ಹೆಸರನ್ನು ‘ತುಳುನಾಡ ಒಕ್ಕೂಟ’ ಎಂದು ನಾಮಕರಣ ಮಾಡಲು ನಿರ್ಧರಿಸಲಾಯಿತು. ಹಿಂದಿನ ಸಭೆಯಲ್ಲಿ ಈ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿತ್ತು.

ಒಕ್ಕೂಟಕ್ಕೆ ಸೇರಲು ಇಚ್ಛಿಸುವ ಸಂಘಟನೆಗಳು ತಮ್ಮ ತಮ್ಮ ಸಂಘಟನೆಗಳಲ್ಲಿ ಚರ್ಚಿಸಿ ನಿರ್ಣಯ ಅಂಗೀಕರಿಸಿ, ಆ ಪತ್ರವನ್ನು ಅಕ್ಟೋಬರ್ 31, 2026ರೊಳಗೆ ವಾಟ್ಸಪ್ ಮೂಲಕ ಕಳುಹಿಸಬೇಕು ಎಂದು ತೀರ್ಮಾನಿಸಲಾಯಿತು.

ಒಕ್ಕೂಟದ ಬೈಲಾ (ನಿಯಮಾವಳಿ)ವನ್ನು ಸಂಪೂರ್ಣವಾಗಿ ಸಿದ್ಧಪಡಿಸಿ, ಅದನ್ನು ಅಡಾಕ್ ಸಮಿತಿಗೆ ಒಪ್ಪಿಸಿ, ನಂತರ ತುಳುನಾಡ ಒಕ್ಕೂಟವನ್ನು ನೋಂದಣಿ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಈ ಹಿನ್ನೆಲೆಯಲ್ಲಿ ನವೆಂಬರ್ 1, 2026ರ ಸಂಜೆ 5 ಗಂಟೆಗೆ ಸ್ವಾಗತ್ ಹೋಟೆಲ್‌ನಲ್ಲಿ ಮತ್ತೆ ಸಭೆ ಸೇರಲು ನಿರ್ಧರಿಸಲಾಯಿತು.ಟಿ.ಎಸ್. ನಾಗರಾಜ್ ಪ್ರಾರ್ಥಿಸಿದರು. ತುಳುವೆರೆಂಕುಲು ಸಂಘಟನೆಯ ಅಧ್ಯಕ್ಷ ಚಾರ್ಲ್ಸ್ ಗೋಮ್ಸ್ ಸ್ವಾಗತಿಸಿದರು. ತುಳುವೆರೆಂಕುಲು ಸಂಘಟನೆಯ ಕಾರ್ಯದರ್ಶಿ ಉಮೇಶ್ ಕರ್ಕೇರ ವಂದಿಸಿದರು.

ಸಭೆಯಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಆನಂದ ಬಳಗದ ಟಿ.ಎಸ್. ನಾಗರಾಜ್, ತುಳುವೆರೆಂಕುಲು ಬೆಂಗಳೂರು ತಂಡದ ಚಾರ್ಲ್ಸ್ ಗೋಮ್ಸ್, ತುಳುವೆರೆಂಕುಲು ಇದರ ಉಮೇಶ್ ಬಿ. ಕರ್ಕೇರ, ಬೆಂಗಳೂರು ತುಳುವೆರೆ ಚಾವಡಿಯ ಅಧ್ಯಕ್ಷ ಮುಂಡಾಳಗುತ್ತು ವಿಶುಕುಮಾರ್‌ ರೈ, ತುಳು ಕೂಟದ ದಿನೇಶ್ ಹೆಗ್ಗಡೆ, ತುಳುವೆರೆ ಛಾವಡಿಯ ಪುರುಷೋತ್ತಮ ಚೆಂಡ್ಲಾ, BSM ಜೈನ್ ಸಂಘದ ಹರಿಶ್ಚಂದ್ರ ಜೈನ್, ಕುಲಾಲ್ ಸಂಘದ ಮಾಧವ,ಯಕ್ಷ ತರಂಗದ ಪಳ್ಳಿ ವಿಶ್ವನಾಥ ಶೆಟ್ಟಿ, ದಕ್ಷಿಣ ಕನ್ನಡ ಕೂಟದ ವಾಮನ ಬೆಂಗರೆ, ಐಲೇಸ ತಂಡದ ಶಾಂತರಾಮ ಶೆಟ್ಟಿ, ಬಿಲ್ಲವ ಸಂಘದ ಜಲಜಶೇಖರ ಶೇಖರ್, ತುಳುನಾಡು ತಂಡದ ವಿನಯ್ ಜೈ,ದಕ್ಷಿಣ ಕನ್ನಡಿಗರ ಸಂಘದ ಕೆ.ಸಿ. ಬಲ್ಲಾಲ್, ಕರಾವಳಿ ಮಿತ್ರ ಬಳಗದ ದಿವಾಕರ ಬಿ.ಕೆ, FKCAಯ ಝವೀನ ಲೋಬೊ, ತುಳು ಕುಲದ ಅನಿಲ್, ಜೈ ತುಳುನಾಡು ತಂಡ ನಿಧೀಶ್ ಶೆಟ್ಟಿ,ಜೈ ತುಳುನಾಡು ತಂಡದ ಧನಂಜಯ್, ದಕ್ಷಿಣ ಕನ್ನಡ ಕೂಟದ ಶಿವಶಂಕರ, ತುಳುವೆರೆ ಛಾವಡಿಯ ಶಿವರಾಜ್, ತುಳುವೆರೆ ಛಾವಡಿಯ ರಘುವೀರ್ ನಾಯಕ್, ತೌಳವ ಸಂಗಮದ ಅಧ್ಯಕ್ಷ ರಾಜರಾಮ್‌ ಶೆಟ್ಟಿ ಉಪ್ಪಳ, ಕರಾವಳಿ ಮಿತ್ರ ಬಳಗದ ನಾಗೇಶ್, FKCA (ಕೊಂಕಣಿ)ಯ ಅಂತೋನಿ, ದಕ್ಷಿಣ ಕನ್ನಡಿಗರ ಸಂಘದ ಲೀಲಾವತಿ, ತುಳುವೆರೆಂಕುಲು ತಂಡದ ರೇವತಿ, ದೀಪಕ್ ಶೆಟ್ಟಿ ಜಗತ್ ಕೆ., ಪದ್ಮಶಾಲಿ ಸಂಘದ ಚಂದ್ರಹಾಸ ಎಸ್ ಹಾಗು ಇತರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here