







ರಾಮಕುಂಜ: ಇಲ್ಲಿನ ಸಂಪ್ಯಾಡಿ (ಕುಂಡಾಜೆ) ಅಂಗನವಾಡಿಯಲ್ಲಿ ಸುಮಾರು 25ವರ್ಷ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲೀಲಾವತಿ ಸಂಪ್ಯಾಡಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಮಶ್ಚಿದ್ ರಹ್‌ಮಾನ್ ಮುಬಾರಕ್ ಮಸೀದಿ ವತಿಯಿಂದ ಮಸೀದಿ ಅಧ್ಯಕ್ಷ ಶಾಹುಲ್ ಹಮೀದ್ ಕುಂಡಾಜೆಯವರು 20 ಸಾವಿರ ರೂ. ಆರ್ಥಿಕ ನೆರವು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ರಾಮಕುಂಜ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಮಸೀದಿ ಕಾರ್ಯದರ್ಶಿ ಮಹಮ್ಮದ್ ಕುಂಡಾಜೆ, ಸಾಮಾಜಿಕ ಕಾರ್ಯಕರ್ತ, ದಾನಿ ಫಾರೂಕ್ ಅಮೈ, ಗೋವರ್ಧನ ಸಂಪ್ಯಾಡಿ ಉಪಸ್ಥಿತರಿದ್ದರು.













