ಸಿರಿಬಾಗಿಲು: ಮರಕ್ಕೆ ಆಟೋ ರಿಕ್ಷಾ ಡಿಕ್ಕಿ -ಮೂವರಿಗೆ ಗಾಯ

0

ನೆಲ್ಯಾಡಿ: ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಸೆ.27ರಂದು ನಡೆದಿದೆ.


ದೇರಣೆ ನಿವಾಸಿ ಟಿ.ಜನಾರ್ದನ ಗೌಡ (45ವ.), ಅವರ ತಾಯಿ ಕಮಲ, ಮಗ ಚಿರಾಯು ಗಾಯಗೊಂಡವರಾಗಿದ್ದಾರೆ. ಜನಾರ್ದನ ಗೌಡ ಅವರು ತಮ್ಮ ಪತ್ನಿಗೆ ಸೇರಿದ ಆಟೋ ರಿಕ್ಷಾ ದಲ್ಲಿ ಹೊನ್ನಪ್ಪ ಗೌಡ ಎಂಬವರನ್ನು ಚಾಲಕರಾಗಿ ಕರೆದುಕೊಂಡು ತಾಯಿ ಕಮಲ ಹಾಗೂ ಮಗ ಚಿರಾಯು ಅವರೊಂದಿಗೆ ಮನೆಯಿಂದ ಸುಬ್ರಹ್ಮಣ್ಯ ಕಡೆಗೆ ಗುಂಡ್ಯ-ದೇರಣೆ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ದೇರಣೆ ಬಳಿ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜನಾರ್ದನ ಗೌಡ ಅವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿದ್ದ ಅವರ ತಾಯಿ ಕಮಲ, ಮಗ ಚಿರಾಯು ಅವರಿಗೂ ಗಾಯವಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್‌ನಲ್ಲಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಜನಾರ್ದನ ಗೌಡರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ತಡವಾಗಿ ಪೊಲೀಸ್ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here