







ಗಾಂಧೀಜಿಯವರ ಕನಸಿನ ಭಾರತ ನಮ್ಮ ಪ್ರತಿಜ್ಞೆ ಯಾಗಬೇಕು : ಭರತ್ ಮುಂಡೋಡಿ


ಸುಳ್ಯ: ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆಗೈದು ಮಾತನಾಡಿ, “ಯಾವುದೇ ರಾಜಕೀಯ ಉನ್ನತ ಹುದ್ದೆಯನ್ನು ಪಡೆಯದ ನಾಯಕನ ನಿಧನಕ್ಕೆ ವಿಶ್ವಸಂಸ್ಥೆಯಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸಿ ಸಂತಾಪ ಸೂಚಿಸಿದ ನಿದರ್ಶನ ಬೇರಿಲ್ಲ. ಗಾಂಧೀಜಿಯವರ ವಿಚಾರಧಾರೆಯನ್ನು ಇಡೀ ವಿಶ್ವ ಅಂಗೀಕರಿಸಿದೆ ಎಂಬುದಕ್ಕೆ ಇದು ಸಾಕ್ಷಿ. ಗಾಂಧೀಜಿಯವರ ಕನಸಿನ ಭಾರತ ನಮ್ಮ ಪ್ರತಿಜ್ಞೆಯಾಗಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಭಾಗವಹಿಸಿದ್ದರು.ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ, ತಹಸೀಲ್ದಾರ್ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಉಪಸ್ಥಿತರಿದ್ದರು.ಉಪ ತಹಸೀಲ್ದಾರ್ ಚಂದ್ರಕಾಂತ್ ಸ್ವಾಗತಿಸಿ, ಸಿಡಿಪಿಒ ಶೈಲಜಾ ವಂದಿಸಿದರು.













