







ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತ್ತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ರವರ ಜನ್ಮ ದಿನಾಚರಣೆಯನ್ನು ಅ.2ರಂದು ಆಚರಿಸಲಾಯಿತು


ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಮಹಾತ್ಮ ಗಾಂಧಿಜೀ ರವರು ಜೀವನ ಶೖೆಲಿ ಮತ್ತು ಅದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳು ಮೂಲಕ ಅವರ ಸ್ವಚ್ಛ ಭಾರತ ಪರಿಕಲ್ಪನೆ ಕನಸು ಸಕಾರಕ್ಕೆ ಪಣತೋಡೋಣ ಎಂದು ಹೇಳಿ ಶುಭಾಶಯ ವ್ಯಕ್ತಪಡಿಸಿದರು.




ಬಳಿಕ ವಿಬಿ-ಜಿ ರಾಮ್ ಯೋಜನೆಯಡಿ ‘ಮಹಾತ್ಮ ಗಾಂಧಿ ಸುಧಾರಣೋತ್ಸವ’ ವಿಶೇಷ ಗ್ರಾಮ ಸಭೆಯ ನಡೆಸಿ ಕ್ರಿಯಾಯೋಜನೆ ತಯಾರಿಸಲಾಯಿತು.
ಸ್ವಚ್ಛತಾ ಕಾರ್ಯಕ್ರಮ
ಕಾರ್ಯಕ್ರಮದ ಬಳಿಕ ಗ್ರಾ.ಪಂ ನ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಬಡಗನ್ನೂರು ಪೇಟೆ ಮೂಲಕ ಸುಳ್ಯಪದವು ವರೆಗೆ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಬಿ, ಕಾರ್ಯದರ್ಶಿ ರಾಮ ನಾಯ್ಕ, ಗ್ರಾ. ಪಂ ಮಾಜಿ ಸದಸ್ಯರಾದ ಸಂತೋಷ ಆಳ್ವ, ವೆಂಕಟೇಶ್ ಕನ್ನಡ್ಕ ಪಂಚಾಯತ್ ಸಿಬ್ಬಂದಿಗಳು ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು,ಬಡಗನ್ನೂರು ಕೃಷಿ ಮತ್ತು ಪಶುಸಕಿಯರು, ಹಾಗೂ ಗ್ರಾಮಸ್ಥರು ಭಾಗವಹಿಸಿದರು.










