







ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ಮಹಾತ್ಮ ಗಾಂಧಿಯವರ 157 ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.


ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚಣೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಶೋಧ ನೆರೋಲ್ತಡ್ಕ, ಪೂರ್ವ ಪ್ರಾಥಮಿಕ ಶಾಲೆಯ ಪೋಷಕರ ಸಮಿತಿಯ ಅಧ್ಯಕ್ಷ ಕುಸುಮಾಧರ ಕೋಲ್ಪೆ, ಉಪಾಧ್ಯಕ್ಷೆ ಸವಿತ ನೂಜಾಡಿ, ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ಹಿತಚಿಂತಕರ ಭಾಷಣ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.



ಎಸ್ ಡಿ ಎಂ ಸಿ ಸದಸ್ಯರಾದ ದಿನೇಶ್ ಅನ್ಯಾಡಿ, ಚಂದ್ರಶೇಖರ ಬೈತಡ್ಕ, ಚಂದ್ರಶೇಖರ ಕಟ್ಟತ್ತರು, ಸೀತಾರಾಮ ಮಿತ್ತಮೂಲೆ, ಗೌರಿ ಮಾದೋಡಿ, ಆಶಾ ಕಟ್ಟತ್ತಾರು, ದುಗ್ಗಪ್ಪ ಗೌಡ ಪಾಲೆತಡ್ಕ ವಸಂತಿ ಅಜೀರಂಗಳ, ಪೋಷಕರಾದ ಯಶಕಲಾ ಮುಗರಂಜ, ದಿವ್ಯ ಪಾಲೆತಡ್ಕ, ಪ್ರೇಮ ಮಾದೋಡಿ ,ದಿವ್ಯ ಪಾಲೆತಡ್ಕ, ದಿವ್ಯ ಬೆಳಂದೂರು, ಪದ್ಮಿನಿ ಮುಗರಂಜ, ಜಯಲಕ್ಷ್ಮಿ ಬೆಳಂದೂರು, ನಾಗವೇಣಿ ಭಾಗವಹಿಸಿದ್ದು ಸ್ವಚ್ಛತೆ ಕಾರ್ಯಕ್ರಮ ನಡೆಸಿದರು.










