







ಪುತ್ತೂರು: ಪುತ್ತೂರು ಶ್ರೀ ರಾಧಾಕೃಷ್ಣ ಮಂದಿರದ ರಸ್ತೆ ಬಳಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ದರ್ಬೆ, ಉಪ್ಪಿನಂಗಡಿ, ಕಾಣಿಯೂರಿನಲ್ಲಿ ಶಾಖೆಗಳನ್ನು ಜೊತೆಗೆ ನೆಹರುನಗರದಲ್ಲಿ ಪಡಿತರ ವಿತರಣಾ ಕೇಂದ್ರ ಹೊಂದಿಕೊಂಡು ಸುಮಾರು 3713 ಸದಸ್ಯರನ್ನು ಒಳಗೊಂಡು ಸುವರ್ಣ ಸಂಭ್ರಮದಲ್ಲಿರುವ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತಿ ತಿಂಗಳು ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಂಡಿರುವಂತೆ ಅ.4ರಂದು ಮಹಿಳೆಯರಿಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.


ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇದರ ಸಹಯೋಗದೊಂದಿಗೆ ನಡೆಯುವ ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ಹೃದಯ ರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಸಾಮಾನ್ಯ ವೈದ್ಯಕೀಯ, ಸ್ತ್ರೀರೋಗ ಮತ್ತು ಕ್ಯಾನ್ಸರ್ ವಿಭಾಗ ತಪಾಸಣೆ ನಡೆಯಲಿದ್ದು ಇದರ ಜೊತೆಗೆ ಆರೋಗ್ಯ ಕಾಪಾಡುವ ಕುರಿತು ಮಾಹಿತಿ ಶಿಬಿರವೂ ನಡೆಯಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾಹಿತಿ ಮತ್ತು ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಸಂಘದ ಅಧ್ಯಕ್ಷೆ ಗೌರಿ ಹೆಚ್ ಅವರು ವಿನಂತಿಸಿದ್ದಾರೆ.













