ನೆ.ಮುಡ್ನೂರು: ಕೆಟ್ಟುಹೋದ ಮಳೆ ಮಾಪನ ಯಂತ್ರ, ರೈತರ ಬೆಳೆಹಾನಿ ಸಮೀಕ್ಷೆಗೆ ತೊಡಕು – ದುರಸ್ತಿಗೆ ಆಗ್ರಹ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಮಳೆ ಮಾಪನ ಯಂತ್ರ ಕೆಟ್ಟುಹೋಗಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ರೈತರ ಬೆಳೆಹಾನಿ ಪರಿಹಾರ ಹಾಗೂ ವಿಮಾ ಪರಿಹಾರಕ್ಕಾಗಿ ಸಮೀಕ್ಷೆ ನಡೆಸಲು ತೊಡಕು ಉಂಟಾಗಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.

ಮಳೆ ಪ್ರಮಾಣದ ನಿಖರ ದಾಖಲೆ ಲಭ್ಯವಾಗದ ಹಿನ್ನೆಲೆಯಲ್ಲಿ ಗ್ರಾಮದ ರೈತರಿಗೆ ವಿಮಾ ಪರಿಹಾರ ಸಮರ್ಪಕವಾಗಿ ದೊರೆಯುತ್ತಿಲ್ಲ. ಆದ್ದರಿಂದ ಕೆಟ್ಟುಹೋಗಿರುವ ಮಳೆ ಮಾಪನ ಯಂತ್ರವನ್ನು ತಕ್ಷಣ ದುರಸ್ತಿಗೊಳಿಸಿ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಪುತ್ತೂರು ಕಿಸಾನ್ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ರಾಮ ಮೇನಾಲ, ಪ್ರಗತಿಪರ ಕೃಷಿಕ ಗಿರೀಶ್ ರೈ ಮರಕ್ಕಡ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಅಬುಲ್ ಕುಂಞಿ, ಅಬ್ದುಲ್ ಸಲಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here