







ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಪುತ್ತೂರು ತಾಲೂಕು ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಗಂಗಾಧರ ಅವರಿಗೆ ಅರುಣ ಸಾರಥಿ ಸಂಘಟನೆ ವತಿಯಿಂದ 10 ಸಾವಿರ ರೂ. ಧನಸಹಾಯ ನೀಡಲಾಯಿತು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಿಂದವಿ ಕಚೇರಿಯಲ್ಲಿ ಧನಸಹಾಯ ಹಸ್ತಾಂತರಿಸಲಾಯಿತು.



ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ನಿರ್ದೇಶಕ ರೂಪೇಶ್ ನಾಯ್ಕ್, ಅರುಣ ಸಾರಥಿ ಆಟೋ ಚಾಲಕ ಸಂಘಟನೆಯ ಪ್ರಮುಖರಾದ ಸಂದೇಶ್ ನಾಯ್ಕ್ ಕೆಯ್ಯೂರು, ಸಚಿನ್ ವಳತ್ತಡ್ಕ, ಸ್ವಸ್ತಿಕ್ ಗೌಡ ತಾರಿಗುಡ್ಡೆ, ಗುರುಪ್ರಸಾದ್ ದೊಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು.
ಅರುಣ ಸಾರಥಿ ಸಂಘಟನೆ ವತಿಯಿಂದ ಈವರೆಗೆ ಒಟ್ಟು 2,50,000 ರೂ. ಧನಸಹಾಯವನ್ನು ಅನಾರೋಗ್ಯ ಪೀಡಿತರಿಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.










