ಅ.5ರಿಂದ ಕೆಮ್ಮಾಯಿ ಭರತಪುರ ಶ್ರೀಪಂಚಮುಖಿ ಗುರುಕುಲಂನಲ್ಲಿ ಗಾಂಧಾರಿ ಚೈತನ್ಯ ವಿದ್ಯೆ

0

ಪುತ್ತೂರು: ಓಂ ಶ್ರೀಪಂಚಮುಖಿ ಗುರುಕುಲಂ ಅರ್ಪಿಸುವ ಆತ್ಮ ಚೈತನ್ಯ ಹೋಲಿಸ್ಟಿಕ್ ಹೀಲಿಂಗ್ ಸೆಂಟರ್ ಸಂಯೋಜನೆಯಲ್ಲಿ 6 ರಿಂದ 16 ವರ್ಷದ ಮಕ್ಕಳಿಗಾಗಿ ರಾಜ್ಯಮಟ್ಟದ ದಸರಾ ಶಿಬಿರ, ಋಷಿ ಪ್ರಣೀತ ರಾಜವಿದ್ಯೆಯ ಯೋಗ ಶಿಬಿರ, ಕಣ್ಣು ಮುಚ್ಚಿ ಸಂಯಮ ಸಿದ್ಧಿಸಿಕೊಂಡು ಅನಂತ ವಿಸ್ಮಯಗಳನ್ನು ಅನುಭವ ಹೊಂದಲು ವಸತಿಯುತ ಹಾಗೂ ವಸತಿ ರಹಿತ ಗಾಂಧಾರಿ ಚೈತನ್ಯ ವಿದ್ಯೆ ಅ.5 ರಿಂದ 24ರವರೆಗೆ ಕೆಮ್ಮಾಯಿ ಭರತಪುರ ಓಂ ಶ್ರೀಪಂಚಮುಖಿ ಗುರುಕುಲಂನಲ್ಲಿ ನಡೆಯಲಿದೆ.


ಮೊದಲ ಬ್ಯಾಚ್ ಅ. 5 ರಿಂದ 12, ಎರಡನೇ ಬ್ಯಾಚ್ 10 ರಿಂದ 17 ಹಾಗೂ ಮೂರನೇ ಬ್ಯಾಚ್ 15 ರಿಂದ 22ರವರೆಗೆ ನಡೆಯಲಿದೆ. ತರಬೇತಿ ಬಯಸುವವರಿಗೆ, ಪೋಷಕರಿಗೆ ಹಾಗೂ ಮಕ್ಕಳಿಗಾಗಿ ಗುರುಕುಲ ಪದ್ಧತಿಯ ವಸತಿಯುತ ಹಾಗೂ ವಸತಿ ರಹಿತ ಆನ್ ಲೈನ್ ಮುಖಾಂತರ ತರಬೇತಿಗಳು ನಡೆಯಲಿದೆ. ಚೇತನ್ ಗುರೂಜಿ ತರಬೇತುದಾರರಾಗಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಭಾಗವಹಿಸಲು ಮೊ: 9380703214, ಓಂ ಶ್ರೀ ಪಂಚಮುಖಿ ಗುರುಕುಲಂ, ಭರತಪುರ, ಕೆಮ್ಮಾಯಿ, ಚಿಕ್ಕಮೂಡ್ನೂರು ಗ್ರಾಮ, ಪುತ್ತೂರು ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here