ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ವಿದ್ಯಾಭಾರತಿ ಗಣಿತ ವಿಜ್ಞಾನ ಮೇಳ ಸಂಸ್ಕೃತಿ ಮಹೋತ್ಸವ -2026 ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್‌ ಸಂಬಂಧಿತ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದಗಣಿತ – ವಿಜ್ಞಾನಮೇಳ, ಸಂಸ್ಕೃತಿ ಮಹೋತ್ಸವ – 2026 ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿಜಯವಾಡ ಸಮೀಪದ ‘ವಿಜ್ಞಾನ ವಿಹಾರ ಆಂಗ್ಲ ಮಾಧ್ಯಮ ಶಾಲೆ -ನೂತಕ್ಕಿ’ಇಲ್ಲಿ ಅ.2ರಿಂದ ಅ.04ರವರೆಗೆ  ನಡೆದಿದ್ದು, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ.

 ಬಳ್ಳಾರಿಯಲ್ಲಿ ನಡೆದ ಪ್ರಾಂತ ಮಟ್ಟದ ಕಿಶೋರವರ್ಗದ  ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ಸೆನ್ಸಾರ್ ವಿಜ್ಞಾನ ಮಾದರಿ’ ಎಂಬ ವಿಷಯದಲ್ಲಿ 10ನೇ ತರಗತಿಯ ಕ್ಷಮೇತ್ ಜೈನ್ ( ಶ್ರೀ ಹನೀಶ್ ಕುಮಾರ್ ಮತ್ತು ಶ್ರುತಿ ಕುಮಾರಿ ವೈ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದು ಉತ್ತರಖಂಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ ಎಂದು ಶಾಲಾ ಮುಖೋಪಾಧ್ಯಾಯರಾದ ಸತೀಶ್ ಕುಮಾರ್‌ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here