ಉಪ್ಪಿನಂಗಡಿ: ನಾಪತ್ತೆಯಾದ ವ್ಯಕ್ತಿಗಾಗಿ ನದಿಯಲ್ಲಿ ಹುಡುಕಾಟ

0

ಉಪ್ಪಿನಂಗಡಿ: ನಾಪತ್ತೆಯಾಗಿರುವ ಹಿರೇಬಂಡಾಡಿಯ ಪೆರಾಬೆ ನಿವಾಸಿ ಮಾಧವ ಗೌಡ (44) ಅವರ ಬೈಕ್ ಹಾಗೂ ಮೊಬೈಲ್ ಉಪ್ಪಿನಂಗಡಿ ಕುಮಾರಧಾರ ಹಳೆ ಸೇತುವೆಯ ಮೇಲೆ ಪತ್ತೆಯಾದ ಹಿನ್ನೆಲೆಯಲ್ಲಿ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯಿಂದ ಅ.4ರಂದು ಪುತ್ತೂರು ಅಗ್ನಿಶಾಮಕದಳದ ತಂಡ ಹಾಗೂ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದರು.


ಕುಮಾರಧಾರ ಹಳೆ ಸೇತುವೆಯ ಬಳಿಯಿಂದ ನದಿಯಲ್ಲಿ ದೋಣಿಯಲ್ಲಿ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಮಧ್ಯಾಹ್ನದಿಂದ ಸಂಜೆಯವರೆಗೆ ನಾಪತ್ತೆಯಾಗಿರುವ ಮಾಧವ ಗೌಡ ಅವರಿಗಾಗಿ ಹುಡುಕಾಟ ನಡೆಸಿದರು. ಆದರೆ ಅವರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಬಳಿಕ ಹುಡುಕಾಟವನ್ನು ಕೈಬಿಡಲಾಯಿತು. ಆತೂರಿನಲ್ಲಿ ಟಯರ್ ಪಂಕ್ಚರ್ ಅಂಗಡಿಯನ್ನು ಇತ್ತೀಚೆಗಷ್ಟೇ ಆರಂಭಿಸಿದ್ದ ಮಾಧವ ಗೌಡ ಅವರು ಅ.2ರಂದು ಮನೆಯಿಂದ ಅಂಗಡಿಗೆಂದು ತೆರಳಿದವರು ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಆದರೆ ಅವರ ಬೈಕ್ ಮತ್ತು ಮೊಬೈಲ್ ಉಪ್ಪಿನಂಗಡಿಯ ಕುಮಾರಧಾರ ನದಿಯ ಹಳೆ ಸೇತುವೆಯ ಮೇಲೆ ಪತ್ತೆಯಾಗಿತ್ತು. ಅವರ ನಾಪತ್ತೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here