ಕೆಯ್ಯೂರು: ಒಡಿಯೂರು ಸಮೃದ್ಧಿ ಸ್ವಸಹಾಯ ಸಂಘ ಉದ್ಘಾಟನೆ

0

ಪುತ್ತೂರು: ಒಡಿಯೂರು ಶ್ರೀ ಗ್ರಾಮ ವಿಕಾಸ ಸ್ವಸಹಾಯ ಸಂಘ ಪ್ರಾಯೋಜಿತ ಒಡಿಯೂರು ಸಮೃದ್ಧಿ ಸ್ವಸಹಾಯ ಸಂಘವನ್ನು ಬಲ್ಕಾಡು ಚಂದ್ರಶೇಖರ ಸೊರಕೆರವರ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಇತ್ತೀಚಿಗೆ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಸೊರಕೆ, ಕಾರ್ಯದರ್ಶಿ ಕುಸುಮಾವತಿ, ಕೋಶಾಧಿಕಾರಿ ಸುಧಾ ಎಸ್.ಜಿ ರೈ, ಸದಸ್ಯರುಗಳಾದ ಸುನಂದ ಬಿ, ಸಂದ್ಯಾ ಕೆ, ಚಂದ್ರಹಾಸ, ಸತೀಶ ಕೆರವರುಗಳು ಉಪಸ್ಥಿತರಿದ್ದರು.ಪುತ್ತೂರು ವಲಯ ಸಂಯೋಜಕಿ ಶಶಿ ಡಿಯವರು ಸಂಘದ ಮಾಹಿತಿ ನೀಡಿದರು. ಕೆದಂಬಾಡಿ ಸೇವಾ ದೀಕ್ಷಿತೆ ಭಾರತಿಯವರು ಸಂಘ ರಚಿಸಿದರು. ಕೆದಂಬಾಡಿ ಘಟಕ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here