ಅ.9 ರಿಂದ ಕಲ್ಲಾರೆ ವರ್ಣಕುಟೀರದಲ್ಲಿ 8 ದಿನಗಳ ಗಾಂಧಾರಿ ವಿದ್ಯೆ ತರಗತಿ ಆರಂಭ

0

ಪುತ್ತೂರು: ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಸ್ಯಾಂಡ್ ಆರ್ಟ್ ಮಾಡುವ ಮೂಲಕ ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ ಗೆ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳು ಪುತ್ತೂರಿನ ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ತರಬೇತು ಪಡೆಯುತ್ತಿದ್ದು ಇದೀಗ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಅ.9 ರಿಂದ 18ರ ತನಕ ಗಾಂಧಾರಿ ವಿದ್ಯೆ ತರಗತಿಯನ್ನು ಆರಂಭಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ವರ್ಣಕುಟೀರದ 6 ಮಂದಿ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆಕಟ್ಟಿ 30 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಮಾಡುವ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದೀಗ ಆ ಸಾಧನೆಯ ಮುಂದುವರಿದ ಭಾಗವಾಗಿ ಸಂಸ್ಥೆಯ ಕಿರಿಯ ವಿದ್ಯಾರ್ಥಿ ಗಿರಿವಿಹಾರಿ ಎಂಬವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪುತ್ತೂರಿನಿಂದ ಮಂಗಳೂರಿಗೆ ಸೈಕಲ್ ಜಾಥ ಮಾಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳ ಪೋಷಕರ ಬೇಡಿಕೆಯಂತೆ 8 ದಿನಗಳ ಗಾಂಧಾರಿ ವಿದ್ಯೆ ತರಗತಿಯನ್ನು ಆರಂಭಿಸುತ್ತಿದ್ದೇವೆ. ಅ.9ರಿಂದ ಸಂಜೆ ಗಂಟೆ 4 ರಿಂದ 5.30 ತನಕ ತರಬೇತಿ ನಡೆಯಲಿದೆ ಎಂದವರು ಹೇಳಿದರು.
ಈ ಸಂದರ್ಭ ಸಂಸ್ಥೆಯ ಪೋಷಕರು ಗಾಂಧಾರಿ ವಿದ್ಯೆಯ ಮೂಲಕ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿದೆ ಎಂಬುದನ್ನು ತಿಳಿಸಿದರು.

ಪತ್ರಿಕಗೋಷ್ಟಿಯಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಗೀತಾಲಕ್ಷ್ಮೀ ಕೆದಿಮಾರು, ವಿದ್ಯಾರ್ಥಿಗಳ ಪೋಷಕರಾದ ಶೈಲಜಾ ಯಂ ಭಟ್, ಶಾರದಾ ಏಕತಡ್ಕ, ರಮ್ಯಾ ಪಂಜಳ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here