ಪುತ್ತೂರು JCI ನಿಯೋ ಪ್ರೈಮ್ ವತಿಯಿಂದ CAPP ತರಬೇತಿ ಕಾರ್ಯಾಗಾರ

0

ಪುತ್ತೂರು: JCI ಪುತ್ತೂರು ನಿಯೋ ಪ್ರೈಮ್ ವತಿಯಿಂದ CAPP (Chairmanship and Parliamentary Procedures) ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜೆಸಿಐ ಮುಳಿಯ ಪರ್ಸನಾಲಿಟಿ ಡೆವಲಪ್‌ಮೆಂಟ್ ಹಾಲ್‌ನಲ್ಲಿ ಅಕ್ಟೋಬರ್ 4ರಂದು ಆಯೋಜಿಸಲಾಯಿತು.

ಸ್ವತಂತ್ರ ಲೆಕ್ಕಪರಿಶೋಧಕ ಹಾಗೂ ಉದ್ಯಮಿ, JCI ಬಳ್ಳಾರಿ ಸ್ಟೀಲ್ ಸಿಟಿಯ ಸಾಗರ್ ಕುಲಕರ್ಣಿ ಅವರು ತರಬೇತುದಾರರಾಗಿ ಭಾಗವಹಿಸಿ, ಪರಿಣಾಮಕಾರಿ ಸಭಾ ನಿರ್ವಹಣೆ, ಸಂಸ್ಥೆಗಳಲ್ಲಿ ಅಧ್ಯಕ್ಷತೆ, ಅಧಿಕಾರಿಗಳು ಹಾಗೂ ಸದಸ್ಯರ ಪಾತ್ರ ಮತ್ತು ಜವಾಬ್ದಾರಿಗಳು, ಸಭಾ ನಡಾವಳಿ, ನಿರ್ಣಯಗಳು ಹಾಗೂ ಸಂಸ್ಥೆಯ ನಿರ್ಧಾರ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗವಹಿಸುವಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಸಂವಾದಾತ್ಮಕ ಚಟುವಟಿಕೆಗಳು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನಡೆಯಿತು.

JCI ಬಳ್ಳಾರಿ ಸ್ಟೀಲ್ ಸಿಟಿಯ ಅಧ್ಯಕ್ಷೆ JC ಚಂದ್ರಿಕಾ ಹಾಗೂ ಸದಸ್ಯ JC ಕೌಶಿಕ್ ಅವರು ತರಬೇತುದಾರರಿಗೆ ಸಹಕರಿಸಿದರು.

ಸದಸ್ಯರಲ್ಲಿ ಸಂಸದೀಯ ನಡಾವಳಿಯ ಅರಿವು, ಪರಿಣಾಮಕಾರಿ ಸಭೆ ನಡೆಸುವ ಕೌಶಲ್ಯ ಹಾಗೂ ಸಂಸ್ಥೆಯ ನಿರ್ಧಾರ ಪ್ರಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವ ಸಾಮರ್ಥ್ಯವನ್ನು ಬೆಳೆಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ಜತೆಗೆ, ಭವಿಷ್ಯದಲ್ಲಿ ಸಂಸ್ಥೆಯ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ನಾಯಕತ್ವ ಗುಣಗಳನ್ನು ಬೆಳೆಸುವತ್ತವೂ ಕಾರ್ಯಾಗಾರ ಗಮನಹರಿಸಿತು. ಸುಮಾರು 20 ಜೇಸಿ ಹಾಗೂ ಜೇಸಿ ಏತರ ಸದಸ್ಯರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

LEAVE A REPLY

Please enter your comment!
Please enter your name here