ಮುಳಿಯ ಶ್ಯಾಮ ಭಟ್ ನಿಧನ : ಹವ್ಯಕ ಸಮಾಜದಿಂದ ಶ್ರದ್ಧಾಂಜಲಿ

0

ಪುತ್ತೂರು : ‘ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಸ್ವರ್ಣಾಭರಣ ಮಳಿಗೆಯ ಮಾಲಕರಾದ, ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕರಾಗಿದ್ದ ಮುಳಿಯ ಶ್ಯಾಮ ಭಟ್ ಅವರ ನಿಧನಕ್ಕೆ ಹವ್ಯಕ ಸಮಾಜದ ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಅವರ ಉದ್ಯಮವನ್ನು ಮುನ್ನಡೆಸುತ್ತಿರುವ ಪುತ್ರ ಕೇಶವ ಭಟ್ ಮುಳಿಯ, ಕೃಷ್ಣ ನಾರಾಯಣ ಮುಳಿಯ, ಪುತ್ರಿ Dr.ವಿದ್ಯಾಸರಸ್ವತಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ, ಅಗಲಿದ ಹಿರಿಯ ಆತ್ಮಕ್ಕೆ ಶಾಂತಿ ಕೋರಿ ರಾಮತಾರಕ ಮಂತ್ರ ಜಪ ಪಠಿಸಲಾಯಿತು.

ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ಉಪಾಧ್ಯಕ್ಷ ಶಿವಶಂಕರ್ ಭಟ್ ಬೋನಂತಾಯ, ಮಂಡಲ ಅಧ್ಯಕ್ಷ ಅರವಿಂದ ಭಟ್ ದರ್ಬೆ, ವಲಯ ಅಧ್ಯಕ್ಷ ವೇಣುಗೋಪಾಲ ಭಟ್ ಮಾಂಬಾಡಿ, ಪದಾಧಿಕಾರಿ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಗುರಿಕ್ಕಾರರಾದ ಕೃಷ್ಣ ಭಟ್ ಜೋಡುಕಟ್ಟೆ ಮತ್ತು ಕೇಶವ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here