ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅ.11ರಿಂದ ಅ.20ರವರೆಗೆ ನವರಾತ್ರಿ ಉತ್ಸವ,, ಭಜನಾ ಸಂಕೀರ್ತನೆ, ವಿಶೇಷ ಅಲಂಕಾರ ಪೂಜೆ

0

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ನಂದನಬಿತ್ತಲ್, ಶ್ರೀ ಕ್ಷೇತ್ರದಲ್ಲಿ ಅ.11 ಅದಿತ್ಯವಾರದಿಂದ ಮೊದಲ್ಗೊಂಡು ಅ 20 ಮಂಗಳವಾರದ ತನಕ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಿಶೇಷ ಭಜನಾ ಸಂಕೀರ್ತನೆಯೊಂದಿಗೆ ನವರಾತ್ರಿ ಉತ್ಸವ ಜರಗಲಿರುವುದು.

ನವರಾತ್ರಿ ಉತ್ಸವದಲ್ಲಿ ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ, ವಾಹನ ಪೂಜೆ ಹಾಗೂ ಹಾಗೂ ಅಕ್ಷರಾಭ್ಯಾಸವು ನಡೆಯಲಿರುವುದು. ಭಕ್ತಾಭಿಮಾನಿಗಳಾದ ತಾವೂ ತನು-ಮನ-ಧನಗಳಿಂದ ಸಹಕರಿಸಿ ಸರ್ವ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here