







ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ,IEEE ಬೆಂಗಳೂರು ವಿಭಾಗ ಮತ್ತು IEEEಮಂಗಳೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿಎಲ್ಎಸ್ಐ, ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯಗಳನ್ನೊಳಗೊಂಡ IEEE ಅಂತಾರಾಷ್ಟ್ರೀಯ ಸಮ್ಮೇಳನ ಡಿಸ್ಕವರ್ 2026 ಅಕ್ಟೋಬರ್ 9 ಮತ್ತು 10 ರಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಅಕ್ಟೋಬರ್ 9 ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸಾವರ್ಕರ್ ಸಭಾಭವನದಲ್ಲಿ ಇದರ ಉದ್ಘಾಟನೆಯು ನಡೆಯಲಿದ್ದು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನವಕಾಂತ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.ಟಿಸಿಎಸ್ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಮಿಶ್ರ ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಅಕ್ಟೋಬರ್ 10 ಶನಿವಾರ ಸಂಜೆ 3.30ಕ್ಕೆ ಸಮಾರೋಪ ಸಮಾರಂಭವು ನಡೆಯಲಿದ್ದು, ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಸುದರ್ಶನ್ ಶೆನ್ವಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. IEEE ಬೆಂಗಳೂರು ವಿಭಾಗದ ತಾಂತ್ರಿಕ ಮತ್ತು ಸಮ್ಮೇಳನ ಪ್ರಾಯೋಜಕತ್ವ ಸಮಿತಿಯ ಸಹ ಅಧ್ಯಕ್ಷ ಡಾ.ವಾಸುದೇವ ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
ಮೂವರು ಖ್ಯಾತ ಸಂಪನ್ಮೂಲ ವ್ಯಕ್ತಿಗಳು ನೂತನ ತಂತ್ರಜ್ಞಾನದ ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಎಐ ಸಂವೇದಕಗಳು ಮತ್ತು ಅದರಾಚೆಗಿನ ಅನ್ವಯಗಳಿಗಾಗಿ ಸೆಮಿಕಂಡಕ್ಟರ್
ವಿಎಲ್ಎಸ್ಐ ತಂತ್ರಜ್ಞಾನ ಈ ವಿಷಯದ ಬಗ್ಗೆ ಐಐಎಸ್ಸಿ ಬೆಂಗಳೂರಿನ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನವಕಾಂತ ಭಟ್, ಸಂಯೋಜಿತ ಸಂವೇದನೆ ಮತ್ತು ಸಂವಹನದಿಂದ 6G ವರೆಗೆ: ಸಂಪರ್ಕದ ಮುಂದಿನ ಅಲೆಯ ರೂಪುರೇಷೆ ಈ ವಿಷಯದಲ್ಲಿ ಸ್ಮಾರ್ಟ್ಬೀಮ್ ರೆಸೊನೆಟಿಕ್ಸ್ ನ ರೀಸರ್ಚ್ ಸೈಂಟಿಸ್ಟ್ ಎಂಡ್ ಫೌಂಡರ್ ಡಾ.ಶ್ವೇತಾ ಅಮಿತ್ ಮತ್ತು ವಿಕೇಂದ್ರೀಕೃತ ಬುದ್ದಿಮತ್ತೆ: ದೊಡ್ಡ ಪ್ರಮಾಣದ ತಂತ್ರಜ್ಞಾನದ ಉತ್ಪಾದನೆಯಲ್ಲಿ ಎಐ ವ್ಯವಸ್ಥೆ ಇದರ ಬಗ್ಗೆ ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಸುದರ್ಶನ್ ಶೆನ್ವಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ.
ಇದಲ್ಲದೆ ಸಂಶೋಧನೆ ಮತ್ತು ನಾವೀನ್ಯತೆ ವಿಕಸನಗೊಳ್ಳುತ್ತಿರುವ ಸಂಶೋಧನಾ ಕ್ಷೇತ್ರದಲ್ಲಿ ಗುಣಮಟ್ಟ, ಪ್ರಮಾಣ ಮತ್ತು ನೈತಿಕ ಆಯಾಮಗಳು ಎನ್ನುವ ವಿಷಯದ ಬಗ್ಗೆ ಚರ್ಚೆ ನಡೆಯಲಿದ್ದು, IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಮಿಶ್ರ, IISc ಬೆಂಗಳೂರಿನ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನವಕಾಂತ ಭಟ್, ಡೆಲ್ ಟೆಕ್ನಾಲಜೀಸ್ನ ಡಾಟಾ ಸೈನ್ಸ್ ವಿಭಾಗದ ನಿರ್ದೇಶಕ ಪಂಡಿತ್ ಕುಲದೀಪ್ ಡೋಂಗ್ರೆ ಮತ್ತು ಬೆಂಗಳೂರಿನ ಗೀತಮ್ ಸ್ಕೂಲ್ ಆಫ್ ಕೋರ್ ಇಂಜಿನಿಯರಿಂಗ್ನ E&ECE ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಅಂಬರ್ ಬಾಜ್ಪಾಯ್ ಇದರಲ್ಲಿ ಭಾಗವಹಿಸುತ್ತಾರೆ.
ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ಅಜಿತ್ ಹೆಬ್ಬಾರ್ ಹೊಸಮಠ ಇದರ ಸಮನ್ವಯಕಾರರಾಗಿರುತ್ತಾರೆ.ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ಕಮ್ಯುನಿಕೇಶನ್, ವಿಎಲ್ಎಸ್ಐ, ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್, ರೊಬೋಟಿಕ್ಸ್ ಮತ್ತು ಹೆಲ್ತ್ ಕೇರ್ ಹೀಗೆ 6 ವಿಭಾಗಗಳಲ್ಲಿ ಈ ಸಮ್ಮೇಳನವು ನಡೆಯಲಿದ್ದು, ದೇಶ ವಿದೇಶಗಳ ಒಟ್ಟು 1071
ಪ್ರಬಂಧಗಳು ಆಗಮಿಸಿದ್ದವು ಇದರಲ್ಲಿ 94 ಪ್ರಬಂಧಗಳನ್ನು ಮಂಡನೆಗಾಗಿ ಆರಿಸಲಾಗಿದೆ.
IEEE ಬಗ್ಗೆ:
ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟಿçಕಲ್ ಎಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (IEEE) ಇದೊಂದು ವಿಶ್ವದ ಅತಿದೊಡ್ಡ ವೃತ್ತಿಪರ ತಾಂತ್ರಿಕ ಸಂಘಟನೆಯಾಗಿದ್ದು, ನೂತನ ತಂತ್ರಜ್ಞಾನಗಳ ಶ್ರೇಷ್ಟತೆಯನ್ನು ಗುರುತಿಸಿ ಅದನ್ನು ಮನುಕುಲದ ಏಳಿಗೆಗಾಗಿ ಬಳಸುವ ಸಾರ್ವಜನಿಕ ದತ್ತಿ ಸಂಸ್ಥೆಯಾಗಿದೆ. ಇದರ ಸದಸ್ಯರು ವ್ಯಾಪಕವಾಗಿ ಉಲ್ಲೇಖಿಸಲ್ಪಡುವ ಪ್ರಕಟಣೆಗಳು, ಸಮ್ಮೇಳನಗಳು, ತಾಂತ್ರಿಕ ಮಾನದಂಡಗಳು ಮತ್ತು ವೃತ್ತಿಪರ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಜಾಗತಿಕ ಸಮುದಾಯಕ್ಕೆ ಸ್ಪೂರ್ತಿಯನ್ನು ನೀಡುತ್ತಾರೆ. ಇಂಜಿನಿಯರಿಂಗ್, ಕಂಪ್ಯೂಟಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂದಿಸಿದ ಮಾಹಿತಿಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಇದು ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಇದರ ಸದಸ್ಯತ್ವವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಇರುವ ತಂತ್ರಜ್ಞಾನ ಕ್ಷೇತ್ರದ ಪರಿಣತರೊಂದಿಗೆ ಸಂಪರ್ಕ ಬೆಳೆಸಲು, ಅಗತ್ಯವಾದ ತಾಂತ್ರಿಕ ಮಾಹಿತಿಯನ್ನು ಪಡೆಯಲು, ತಮ್ಮ ವೃತ್ತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಹಾಗೂ ಇಂಜಿನಿಯರಿಂಗ್ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಗುವ ವಿಶೇಷ ಸವಲತ್ತುಗಳನ್ನು ಪಡೆಯಲು ಇದು ಸಹಕಾರಿಯಾಗಿದೆ. ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ, ಸಂಚಾಲಕ ಪ್ರಸನ್ನ ದರ್ಬೆ, ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕಿಯರಾದ ಡಾ.ಜೀವಿತಾ.ಬಿ.ಕೆ., ಡಾ.ರಜನಿ ರೈ.ಬಿ ಮತ್ತು ಮಾಧ್ಯಮ ವಿಭಾಗದ ಸಂಯೋಜಕ ಡಾ.ಆಶ್ಲೆ ಡಿ.ಸೋಜ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.












