ಕೋಡಿಂಬಾಡಿ: ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ-ಹಾಲು ವಿಶ್ಲೇಷಕ ಯಂತ್ರ ಉದ್ಘಾಟನೆ-ರೋಟರಿ ಸಮುದಾಯ ದಳದ ಪದಗ್ರಹಣ

0

ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗದಲ್ಲಿ ಅ.3ರಂದು ರೋಟರಿ ಕ್ಲಬ್ ಪುತ್ತೂರು ಮತ್ತು ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ
ಆಶ್ರಯದಲ್ಲಿ ಕೋಡಿಂಬಾಡಿ ಗ್ರಾಮದ ಸ್ವಚ್ಛತಾ ಸೇನಾನಿಗಳಾದ ಸೌಮ್ಯ, ಗೀತಾ ಮತ್ತು ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಪುತ್ತೂರು ವತಿಯಿಂದ ಕೊಡಲ್ಪಟ್ಟ ಹಾಲು ವಿಶ್ಲೇಷಕ ಯಂತ್ರದ ಉದ್ಘಾಟನೆ ಇದೇ ವೇಳೆ ನೆರವೇರಿತು. ರೋಟರಿ ಕ್ಲಬ್ ಅಧ್ಯಕ್ಷ ದತ್ತಾತ್ರೇಯ ರಾವ್ ಉದ್ಘಾಟನೆ ನೆರವೇರಿಸಿದರು.

ರೋಟರಿ ಸಮುದಾಯ ದಳ ಕೆಮ್ಮಾಯಿ ಇದರ ಪದಗ್ರಹಣ ಕಾರ್ಯಕ್ರಮದಲ್ಲಿ ರತ್ನಾಕರ್ ಪ್ರಭು ಅಧ್ಯಕ್ಷರಾಗಿ‌ ಮತ್ತು ಕಾರ್ಯದರ್ಶಿಯಾಗಿ ಅಶೋಕ್ ಅಧಿಕಾರ ಸ್ವೀಕರಿಸಿದರು.
ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ
ಜಗನಾಥ್ ಶೆಟ್ಟಿ ನಡುಮನೆ ಸ್ವಾಗತಿಸಿ ನಿರ್ದೇಶಕಿ ರಾಧಿಕಾ ಸಾಮಂತ್ ನೆಕ್ಕರಾಜೆ ಪ್ರಾರ್ಥಿಸಿದರು. ಪರಮೇಶ್ವರ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ನಾಯಕ್ ವಂದಿಸಿದರು.

LEAVE A REPLY

Please enter your comment!
Please enter your name here