ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ವತಿಯಿಂದ ಬಲ್ಪದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ನಿಡ್ಪಳ್ಳಿ ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಇವರ ಹುಟ್ಟು ಹಬ್ಬದ ಪ್ರಯುಕ್ತ ದ ಕ ಜಿಲ್ಲಾ ಮರಾಟಿ ಸಂರಕ್ಷಣಾ ವತಿಯಿಂದ ಬಲ್ಪ ಗ್ರಾಮದ ಬಾಲಾಡಿ ಎಂಬಲ್ಲಿ ವೀರ ಯೋಧ ದಿವಂಗತ ರಾಮ ನಾಯ್ಕ ಏನೇಕಲ್ ಇವರ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣದ ಸುತ್ತಮುತ್ತ ಸ್ವಚ್ಚತಾ ಕಾರ್ಯ ಹಾಗೂ ವಿಶಿಷ್ಟವಾಗಿ ಪೈಂಟಿಂಗ್, ಚಿತ್ರ ನಿರ್ಮಿಸುವ ಕೆಲಸ ನಡೆಯಿತು.

   ಅದೇ ದಾರಿಯಲ್ಲಿ ಹೋಗುತ್ತಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಇವರು ಸ್ಥಳಕ್ಕೆ ಆಗಮಿಸಿ ನಮ್ಮ  ಕಾರ್ಯ ಚಟುವಟಿಕೆ ನೋಡಿ ನಮ್ಮ ಜೊತೆಗೆ ಸ್ವಲ್ಪ ಹೊತ್ತು ಇದ್ದು ನಿಮ್ಮ ಸಂಘಟನೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

   ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ ನಾಯ್ಕ ಕೆದಿಲ, ಸ್ವಚ್ಚತಾ ಸಂಚಾಲಕರಾದ  ತಿರುಮಲೇಶ್ಪರ ಪೆರುವಾಯಿ,ಶೇಷಪ್ಪಅಡ್ಯನಡ್ಕ, ಸತೀಶ್ ಈಶ್ವರಮಂಗಳ,ಯಶವಂತ ಸುಳ್ಯ,ಆನಂದ ಪೆರುವಾಯಿ,ಬಾಲಕೃಷ್ಣ.ಡಿ ನಿಡ್ಪಳ್ಳಿ,ರತ್ನಾವತಿ ದಾರಂದಕುಕ್ಕು,ಪ್ರಸನ್ನ ಕೊಕ್ಕಡ,ಹರೀಶ್ ಮಂಕುಡೆ, ಭರತ್ ನಿಡ್ಪಳ್ಳಿಯೋಗಿಶ್ ಆರ್ಲಪದವು,ಯತೀಶ್ ಆರ್ಲಪದವು ಭಾಗವಹಿಸಿದರು.

LEAVE A REPLY

Please enter your comment!
Please enter your name here