ಕೊಡಗು ಗಡಿ ಸಂಪಾಜೆಯಿಂದ ಮಂಗಳೂರು ವರೆಗೆ ʼಸ್ವಚ್ಛತಾ ದಂಡಯಾತ್ರೆʼಗೆ ಚಾಲನೆ: ಅ.9ರಿಂದ ಆರಂಭ

0

ಪುತ್ತೂರು: ಕಳೆದ ಬಾರಿ ಕಾರವಾರದಿಂದ ಮಂಗಳೂರು ವರೆಗೆ ಹೆಜ್ಜೆ ಹಾಕುತ್ತಾ ರಸ್ತೆ ಬದಿಯ ಕಸವನ್ನು ಗಮನಿಸುತ್ತಾ ನಡೆದಿದ್ದ ಯುವಕನಿಂದ ಇದೀಗ ಮತ್ತೊಂದು ವಿಭಿನ್ನ ಪ್ರಯತ್ನ.

ಈ ಬಾರಿ ಕಸವನ್ನು ನೋಡುತ್ತಾ ನಡೆಯುವುದಲ್ಲ, ರಸ್ತೆ ಬದಿಯ ಕಸವನ್ನು ಸ್ವಚ್ಛ ಮಾಡುತ್ತಾ ಸಾಗುವ ‘ಸ್ವಚ್ಛತಾ ದಂಡಯಾತ್ರೆ’ ಹಮ್ಮಿಕೊಳ್ಳಲಾಗಿದೆ.

ಕೊಡಗು ಗಡಿಯಾದ ಸಂಪಾಜೆಯಿಂದ ಮಂಗಳೂರು ವರೆಗೆ ಅ.9, 2026 ರಿಂದ ಯಾತ್ರೆ ಆರಂಭವಾಗಲಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಾ, ದಾರಿಯಲ್ಲಿ ಸಿಗುವ ಪಂಚಾಯತ್‌ಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಯುವಕರು ಹಾಗೂ ಸಾರ್ವಜನಿಕರನ್ನು ಜೊತೆಗೂಡಿಸಿಕೊಂಡು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

ಸ್ವಚ್ಛತಾ ದಂಡಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹಾಗೂ ಸಂಘ-ಸಂಸ್ಥೆಗಳು 9663506158 ನಂಬರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here