ಪುತ್ತೂರು ನಗರ ವಲಯ ಮಟ್ಟದ 14ರ, 17ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ

0

ಪುತ್ತೂರು: ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಪುತ್ತೂರು, ಪುತ್ತೂರು ನಗರ ವಲಯ ಕ್ರೀಡಾಕೂಟ ಸಮಿತಿ ಮತ್ತು ಸ. ಹಿ. ಪ್ರಾ. ಶಾಲೆ ಕುಡಿಪಾಡಿ ವತಿಯಿಂದ ತೆಂಕಿಲ ವಿವೇಕಾನಂದ ಪ್ರೌಢಶಾಲೆಯಲ್ಲಿ ಪುತ್ತೂರು ನಗರ ವಲಯ ಮಟ್ಟದ 14ರ ವಯೋಮಾನದ ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯ ರುತ್ ಕ್ಯಾಸ್ತಲಿನ ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಕ್ರೀಡಾ ಸ್ಪೂರ್ತಿಯಿಂದ ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಕ್ರೀಡಾ ನಿಯಮಗಳನ್ನು ಪಾಲಿಸುವಂತೆ ತಿಳಿಸಿ, ಎಲ್ಲರಿಗೂ ಶುಭ ಹಾರೈಸಿದರು. ಪುತ್ತೂರು ತಾಲೂಕಿನ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್‌ಎ ಸಂದರ್ಭೋಚಿತವಾಗಿ ಮಾತನಾಡಿದರು. ಕುಡಿಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ರೇಖಾರವರು ಅಧ್ಯಕ್ಷತೆ ವಹಿಸಿದ್ದರು.
ದೀರ್ಘಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿಯ ಅಂಚಿನಲ್ಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯ ಸರಕಾರಿ ಪ್ರೌಢಶಾಲೆ ಕಬಕ, ಸರೋಜಿನಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ, ಕಸ್ತೂರಿ ಪಿಎಂಶ್ರೀ ಕೆಪಿಎಸ್ ಕೆಮ್ಮಿಂಜೆ, ಭಾಸ್ಕರ್ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು ನಗರ ಕ್ಲಸ್ಟರ್‌ನ ಸಿಆರ್‌ಪಿ ಶಶಿಕಲಾ ಹಾಗೂ ಕೋಡಿಂಬಾಡಿ ಕ್ಲಸ್ಟರ್ ಸಿಆರ್‌ಪಿ ದೇವಕಿ, ಕುಡಿಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಹೆಲೆನ್ ಲೋಬೊ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಸತೀಶ್ ರೈ, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆ, ಪುತ್ತೂರು ನಗರ ವಲಯದ ನೋಡಲ್ ಶಿಕ್ಷಕ ಕೃಷ್ಣಯ್ಯ ಸ್ವಾಗತಿಸಿ ಪ್ರಮೀಳಾ ವಂದಿಸಿದರು. ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ ಪಾಪೆಮಜಲು ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು.

ವೈಯಕ್ತಿಕ ಚಾಂಪಿಯನ್:
14ರ ವಯೋಮಾನದ ಬಾಲಕರ ವಿಭಾಗ – ರಾಹುಲ್ ಕೆ, (ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ) 14ರ ಬಯೋಮಾನದ ಬಾಲಕಿಯರ ವಿಭಾಗ- ಕೌಶಿತಾ ಎಸ್, (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ) 17ರ ವಯೋಮಾನದ ಬಾಲಕರ ವಿಭಾಗ- ಮೋಕ್ಷಿತ್ (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ) ಮನಾಫ್ ಮೊಹಮ್ಮದ್ (ಸುದಾನ ವಸತಿಯುತ ಶಾಲೆ, ನೆಹರುನಗರ) 17ರ ವಯೋಮಾನದ ಬಾಲಕಿಯರ ವಿಭಾಗ: ಆತ್ಮಿ ಕೆ. ಎಲ್. (ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ).

ಸಮಗ್ರ ಪ್ರಶಸ್ತಿ:
14ರ ವಯೋಮಾನದ ಬಾಲಕರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪ್ರಥಮ, ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ದ್ವಿತೀಯ, 14ರ ವಯೋಮಾನದ ಬಾಲಕಿಯರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪ್ರಥಮ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ದ್ವಿತೀಯ, 17ರ ವಯೋಮಾನದ ಬಾಲಕರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪ್ರಥಮ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ದ್ವಿತೀಯ, 17 ವಯೋಮಾನದ ಬಾಲಕಿಯರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪ್ರಥಮ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ದ್ವಿತೀಯ.

LEAVE A REPLY

Please enter your comment!
Please enter your name here