







ಪುತ್ತೂರು: ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ನೂತನ ಕಛೇರಿ ಪ್ರವೇಶ ಹಾಗೂ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ಕೊಡುಗೆ ಹಾಗೂ ಸ್ಥಿರ ಠೇವಣಿಗಳ ಬಡ್ಡಿದರದಲ್ಲಿ ಬಂಪರ್ ಕೊಡುಗೆ ಆಯೋಜಿಸಲಾಗಿದೆ.


ಸ್ಥಿರ ಠೇವಣಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.11 ಹಾಗೂ ಹಿರಿಯ ನಾಗರಿಕರಿಗೆ ಶೇ.11.5 ನೀಡಲಾಗುತ್ತದೆ. ಈ ಕೊಡುಗೆ ಅ.30ರವರೆಗೆ ಮಾತ್ರ ಲಭ್ಯವಿರುತ್ತದೆ. ಗ್ರಾಹಕರಿಗೆ ಹೊಸ ಆವರ್ತಕ ಠೇವಣಿ(ಆರ್ಡಿ) ಯೋಜನೆಗಳು ಲಭ್ಯವಿದ್ದು 5 ವರ್ಷದಲ್ಲಿ ಮಾಸಿಕ ರೂ. 1400 ರಂತೆ ಪಾವತಿಸಿದರೆ ರೂ.1,00,000 ನೀಡಲಾಗುವುದು. 3 ವರ್ಷದಲ್ಲಿ ಮಾಸಿಕ ರೂ. 1250 ರಂತೆ ಪಾವತಿಸಿದರೆ ರೂ.50,000 ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8904511029 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.













