ಕೋಡಿಂಬಾಡಿ: ರಸ್ತೆ ಬದಿ ಅಪಾಯಕಾರಿ ಮರಗಳ ತೆರವು ಮತ್ತು ಚರಂಡಿ ದುರಸ್ತಿಗೆ ಮನವಿ

0

ಪುತ್ತೂರು: ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗಳನ್ನು ಸರಿಪಡಿಸುವಂತೆ ಕೋಡಿಂಬಾಡಿ ಗ್ರಾಮದ ಬೆಳ್ಳಿಪ್ಪಾಡಿ ಪರನೀರು ನಿವಾಸಿ ಪದ್ಮಪ್ಪ ಪೂಜಾರಿ ಪರನೀರುರವರು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಿದ್ದಾರೆ.

ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪಾಡಿ ಕ್ರಾಸ್‌ನಿಂದ ಬೊಳಂದೂರು ತನಕ ರಸ್ತೆಯ ಎರಡು ಬದಿಯಲ್ಲಿ ಅಪಾಯಕಾರಿ ಮರಗಳು ಇರುತ್ತದೆ. ಇದರಡಿಯಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಸರಕಾರಿ ಬಸ್ಸು, ಆಟೋ ರಿಕ್ಷಾ, ಶಾಲಾ ವಾಹನಗಳ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತಿರುತ್ತವೆ. ಈ ರಸ್ತೆಯ ಎರಡು ಬದಿಯಲ್ಲಿ ಮಳೆಗಾಲದ ನೀರು ಹರಿದು ಹೋಗುವ ಚರಂಡಿಗಳು ಮುಚ್ಚಿಕೊಂಡಿದ್ದು ಮಳೆನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದ್ದು ವಾಹನಗಳಿಗೆ ಹಾಗೂ ಪಾದಾಚಾರಿಗಳಿಗೆ ಸಂಚರಿಸಲು ಅಸಾಧ್ಯವಾಗಿರುತ್ತದೆ. ಸದ್ದಿ ರಸ್ತೆಯ ಹೆಗ್ಡೆಹಿತ್ತು ಎಂಬಲ್ಲಿ ಈಗಾಗಲೇ ಅರಣ್ಯ ಇಲಾಖೆ ಮತ್ತು ಮೆಸ್ಕಾಂ (ಕೆ.ಇ.ಬಿ.) ಇವರ ಸಹಕಾರ ಹಾಗೂ ಗ್ರಾಮಸ್ಥರ ಮುತುವರ್ಜಿಯಿಂದ ಅಲ್ಲಿದ್ದ ಅಪಾಯಕಾರಿ ಮರಗಳ ತೆರೆವು ಹಾಗೂ ಚರಂಡಿಗಳನ್ನು ಸರಿಪಡಿಸಿರುತ್ತೇವೆ. ಆದುದರಿಂದ ಈ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವು ಹಾಗೂ ನೀರು ಹರಿಯುವ ಚರಂಡಿಗಳ ದುಸ್ಥಿತಿಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here