







ಅ.19ಆಯುಧ ಪೂಜೆ
ಅ.20 ಸಾಮೂಹಿಕ ಚಂಡಿಕಾ ಯಾಗ
ಅ.21 ಅಕ್ಷರಾಭ್ಯಾಸ


ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.11 ರಂದು ಪ್ರಾರಂಭಗೊಂಡು ಅ.20 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆಯಲಿದೆ.




ಅ.11 ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ನಂತರ ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಮೇಳೈಸಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಜೆ ಚಾಲನೆ ದೊರೆಯಲಿದ್ದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಪ್ರತಿದಿನ ನವರಾತ್ರಿಯಲ್ಲಿ…!
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ವಿವಿಧ ಸಾಂಸ್ಕೃತಿಕ ತಂಡಗಳಿಂದ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯಪೂಜೆ, ದುರ್ಗಾಪೂಜೆ, ಲಲಿತಾ ಸಹಸ್ರನಾಮ ಪಾರಾಯಣ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ನಡೆಯುವ ವಿಶೇಷ ರಂಗಪೂಜೆಯಲ್ಲಿ ಭಕ್ತಾದಿಗಳು ಸೇವೆ ಸಲ್ಲಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಅ.19 ಆಯುಧಾ ಪೂಜೆ, ಅ.20 ಚಂಡಿಕಾ ಯಾಗ, ಅ.21ಅಕ್ಷರಾಭ್ಯಾಸ:
ನವರಾತ್ರಿಯಲ್ಲಿ ವಿಶೇಷವಾಗಿ ಅ.19ರಂದು ಅಪರಾಹ್ನ ಆಯುಧಾ ಪೂಜೆ, ವಾಹನ ಪೂಜೆ, ಅ.20ರಂದು ಬೆಳಿಗ್ಗೆ 8.30ರಿಂದ ಸಾಮೂಹಿಕ ಚಂಡಿಕಾ ಯಾಗ, ಅ.೨೧ರ ವಿದ್ಯಾದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ;
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ6ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದು ಅ.11ರ ಪ್ರಥಮ ದಿನದ ಕಾರ್ಯಕ್ರಮದಲ್ಲಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ಇವರ ಶಿಷ್ಯೆಯರಿಂದ ನೃತ್ಯಸಿರಿ' ಭರತನಾಟ್ಯ, ಅ.12ರಂದು ನೆಹರು ನಗರದ ಗಾನ ಸರಸ್ವತಿ ಸಂಗೀತ ಕಲಾ ಶಾಲೆಯ ವಿದುಷಿ ವೀಣಾ ರಾಘವೇಂದ್ರ ಇವರ ಶಿಷ್ಯೆಯರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ’, ನೃತ್ಯೋಪಾಸನಾ ಕಲಾ ಕೇಂದ್ರದ ಶಾಲಿನಿ ಆತ್ಮಭೂಷನ್ ನಿರ್ದೇಶನದಲ್ಲಿ ನೃತ್ಯೋಹಂ', ಅ.13ರಂದು ಬಾಲಕಲಾವಿದೆ ಸೋನಿಕಾ ಜನಾರ್ದನ್ ಬಳಗದವರಿಂದ ಭಕ್ತ ಸಂಗೀತ’, ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವ ದೀಪಕ್ ಕುಮಾರ್ ನಿರ್ದೇಶನದಲ್ಲಿ ನೃತ್ಯಾಂಜಲಿ', ಅ.14ರಂದು ಧೀಶಕ್ತಿ ಯಕ್ಷ ಬಳಗ ತೆಂಕಿಲ ಇವರಿಂದ ಗದಾಯುದ್ಧ’ ಯಕ್ಷಗಾನ ತಾಳಮದ್ದಳೆ, ಉಮಾಮಹೇಶ್ವರ ಸಂಗೀತ ಕಲಾ ಶಾಲೆಯ ವಿದ್ಯಾಲಕ್ಷ್ಮಿ ಈಶ್ವರಚಂದ್ರ ಅವರ ಶಿಷ್ಯೆಯರಿಂದ ಶಾಸ್ತ್ರಿಯ ಸಂಗೀತ, ಅ.15ರಂದು ಶ್ರೀದೇವಿ ಮಹಿಳಾ ಯಕ್ಷ ತಂಡ ಬಾಲವನ ಇವರಿಂದ ಯಕ್ಷಗಾನ ಏಕಾದಶಿ ದೇವಿ ಮಹಾತ್ಮೆ’, ಅ.16ರಂದು ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ಕಲ್ಚರಲ್ ಪ್ರಸ್ತುರ ಪಡಿಸುವ ನೃತ್ಯವೈಭವ' ಅ.17ರಂದು ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್ನ ವಿದುಷಿ ನಿಖಿತಾ ಪಾಣಾಜೆ ನಿರ್ದೇಶನಲ್ಲಿ ಭರತನಾಟ್ಯ’, ಅರ್ಪಿತಾ ಕಲ್ಲೂರಾಯ ಮತ್ತು ದೀಪ್ತಿ ಕುಬಣೂರಾಯ ಇವರಿಂದ ಭಕ್ತಿ ಸುಧಾ', ಅ೧೮ರಂದು ಕಾಂಚಿಪುರನ ಕಾಮಕೋಟಿ ತ್ರಿವೇಣಿ ಶಾಸ್ತç ಸಮುತ್ಕರ್ಷದ ಸಹ ಪ್ರಾಧ್ಯಾಪಕ ಡಾ.ಸತ್ಯನಾರಾಯಣ ಭಟ್ ಹೆಚ್.ಕೆ ಇವರಿಂದ ಶಕ್ತಿ ಪೀಠಗಳ ಮಹಿಮೆ’ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ, ಡಾ.ದುರ್ಗಾಪರಮೇಶ್ವರಿ ಹೆಚ್.ಕೆ ಮತ್ತ ಮನಸ್ವಿನಿ ಇವರಿಂದ ಪಿಟೀಲು ವಾದನ ಮತ್ತು ಭಕ್ತಿ ವೈವಿದ್ಯ', ಅ.19ರಂದು ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ನಿರ್ದೇಶನದಲ್ಲಿ ನೃತ್ಯಾರ್ಪಣಂ’ ಹಾಗೂ ಅ.20ರಂದು ಆರಾಧನಾ ನೃತ್ಯ ತಂಡದ ವಿದುಷಿ ಪೂರ್ಣಿಮಾ ಪ್ರದೀಪ್ ನಿರ್ದೇಶನದಲ್ಲಿ `ನೃತ್ಯ ವೈವಿದ್ಯ’ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಜಿ ತಿಳಿಸಿದ್ದಾರೆ.










