







ಪುತ್ತೂರು:ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.11 ರಿಂದ 20ರ ವರೆಗೆ ನವರಾತ್ರಿ ಉತ್ಸವ ಜರಗಲಿರುವುದು.


ಕಾರ್ಯಕ್ರಮಗಳು:
ಅ.11 ರಂದು ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅ.11 ರಿಂದ 20ರ ವರೆಗೆ ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಸಂಜೆ ಭಜನಾ ಸಂಕೀರ್ತನೆ, ರಾತ್ರಿ ಮಹಾಪೂಜೆ ನಡೆಯಲಿದೆ. ಅ.18 ರಿಂದ 20ರ ವರೆಗೆ ರಾತ್ರಿ ವಾಹನಗಳಿಗೆ ಆಯುಧ ಪೂಜೆ ನೆರವೇರಲಿರುವುದು. ಅ.21 ರಂದು ಬೆಳಿಗ್ಗೆ ಅಕ್ಷರಭ್ಯಾಸ, ವಿಜಯದಶಮಿ ಪೂಜೆ ನಂತರ ಪ್ರಸಾದ ವಿತರಣೆ, ನವಾನ್ನ ಭೋಜನ ಜರಗುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಹಕರಿಸಬೇಕಾಗಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ












