ಪುತ್ತೂರು: ಪೋಕ್ಸೋ ಪ್ರಕರಣ – ಬಂಧಿತ ಆರೋಪಿಗೆ ಜಾಮೀನು

0

ಪುತ್ತೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ತಣ್ಣೀರುಪಂಥ ಗ್ರಾಮದ ಮೊಯಿನು ಯಾನೆ ಮೊಹಿನುದ್ದೀನ್ ಎಂಬಾತನಿಗೆ ಪುತ್ತೂರು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಸೆ.19ರಂದು ಬೆಳಿಗ್ಗೆ ಸುಮಾರು 8 ಗಂಟೆಯ ಹೊತ್ತಿಗೆ ಈ ಪ್ರಕರಣದ ಸಂತ್ರಸ್ತ ಬಾಲಕಿಯು ಕಾಲೇಜಿಗೆ ಹೋಗುವುದಾಗಿ ಹೇಳಿ ಹೋಗಿದ್ದು, ಬೆಳಿಗ್ಗೆ ಸುಮಾರು 10.40 ಗಂಟೆಗೆ ಸುಹೈಲ್ ಎಂಬವರು ಸಂತ್ರಸ್ತೆಯ ತಂದೆಗೆ ಕರೆ ಮಾಡಿ, ಸಂತ್ರಸ್ತೆಯು ದೇರಳಕಟ್ಟೆಯ ಬ್ಯಾರಿಸ್ ಮಾಲ್ ಬಳಿ ಒಂದು ಹುಡುಗನ ಜೊತೆ ಇರುವುದಾಗಿ ತಿಳಿಸಿದ್ದರು.ಸಂಜೆ ಮನೆಗೆ ಬಂದ ಸಂತ್ರಸ್ತೆಯಲ್ಲಿ ಈ ಬಗ್ಗೆ ವಿಚಾರಿಸಿದಾಗ, ಆರೋಪಿಯು ತನ್ನನ್ನು ಮಂಗಳೂರಿಗೆ ಕರೆದುಕೊಂಡು ಹೋಗಿದ್ದ ಎಂಬುದಾಗಿ ತಿಳಿಸಿದ್ದು,ಸಂತ್ರಸ್ತೆಯ ಕುತ್ತಿಗೆಯ ಬಳಿ ಗಾಯವಾಗಿ ರಕ್ತ ಬರುತ್ತಿದ್ದದ್ದನ್ನು ಗಮನಿಸಿ ಕೇಳಿದಾಗ, ಆಕೆ ಉತ್ತರಿಸದೆ ಇದ್ದುದರಿಂದ ಸಂಶಯಗೊಂಡ ಸಂತ್ರಸ್ತೆಯ ತಂದೆ ಸೆ.20ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮೊಯಿನು ಯಾನೆ ಮೊಹಿನುದ್ದೀನ್‌ನನ್ನು ಸೆ.22ರಂದು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here