







ನೆಲ್ಯಾಡಿ: ಮಹಾರಾಷ್ಟ್ರದ ಪುಣೆಯಲ್ಲಿ ಅ.5ರಿಂದ 10ರ ತನಕ ನಡೆದ ೮ನೇ ಡಬ್ಲ್ಯುಜಿಕೆಎಫ್ ವರ್ಲ್ಡ್ ಗೊಜೊರಿಯೊ ಚಾಂಪಿಯನ್ ಶಿಪ್ 2026 ಅಂತರ್ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, 8-9 ವಯಸ್ಸಿನ ಬಾಲಕರ ಟೀಮ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ 4ನೇ ತರಗತಿ ವಿದ್ಯಾರ್ಥಿ, ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ, ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಕೆ.ಕೆ.ಹಾಗೂ ರಂಶೀನ ದಂಪತಿ ಪುತ್ರ ಮೊಹಮ್ಮದ್ ಹಿಶಾಮ್ ಕೆ.ಕೆ. ಅವರಿಗೆ ಕೋಲ್ಪೆಯ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಮೊಹಮ್ಮದ್ ಹಿಶಾಮ್ರನ್ನು ಬಜತ್ತೂರು ಗ್ರಾಮದ ವಳಾಲುನಲ್ಲಿ ಬರಮಾಡಿಕೊಂಡು ಗೋಳಿತ್ತೊಟ್ಟು, ಕೋಲ್ಪೆ, ನೆಲ್ಯಾಡಿ ತನಕ ಮೆರವಣಿಗೆಯಲ್ಲಿ ಕರೆತರಲಾಯಿತು. ಕೋಲ್ಪೆಯಲ್ಲಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ, ಖಲಂದರ್ ಷಾ ದಫ್ ಸಮಿತಿ, ಎಸ್ಕೆಎಸ್ಎಸ್ಎಫ್ ಕೋಲ್ಪೆ ಯೂನಿಟ್, ಭರವಸೆ ಬೆಳಕು ಸಮಿತಿ ಕೋಲ್ಪೆ, ಬಿಷಾರ ಹೆಲ್ಪಿಂಗ್ ಹ್ಯಾಂಡ್ಸ್ ಕೋಲ್ಪೆ, ನೂರಾನಿಯ ಮದರಸ ವಿದ್ಯಾರ್ಥಿಗಳು ಹಾಗೂ ಗುರುಗಳು ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.






ಈ ಸಂದರ್ಭದಲ್ಲಿ ಕೋಲ್ಪೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಶುಕೂರು, ಉಪಾಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಕೊಂಕೋಡಿ, ಖಜಾಂಜಿ ಇಕ್ಬಾಲ್ ಎಸ್, ಕಾರ್ಯದರ್ಶಿಗಳಾದ ಶಮಿರ್ ಅರ್ಷಾದಿ, ರಂಜಾನ್ ಸಾಹೇಬ್, ಮಾಜಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಗೋಳಿತ್ತೊಟ್ಟು ಜಮೀಲ ರಹ್ಮಾನಿಯ ಜುಮಾ ಮಸೀದಿ ಅಧ್ಯಕ್ಷ ಹೆಚ್.ಆರೀಫ್, ಬಿಸರ ಹೆಲ್ಪಿಂಗ್ ಹ್ಯಾಂಡ್ ಅಧ್ಯಕ್ಷ ಅನ್ಸರ್ ಶೇಕ್, ಗೌರವಾಧ್ಯಕ್ಷ ಕೆ.ಎಂ.ಹನೀಫ್, ಭರವಸೆ ಬೆಳಕು ಸಂಘಟನೆ ಅಧ್ಯಕ್ಷ ಎಸ್.ಕೆ.ರಝಾಕ್, ಯು.ಕೆ.ಹಮೀದ್, ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಇರ್ಷಾದ್ ಎಂ, ಕಾರ್ಯದರ್ಶಿ ದಾವೂದ್, ಖಜಾಂಜಿ ರಫೀಕ್ ಕೆ.ಎಂ., ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷ ಕೆ.ಎಂ. ಮೊಹಮ್ಮದ್, ನೂರಾನಿಯ ಮದರಸ ಉಸ್ತಾದ್ ಜಬ್ಬಾರ್ ಅಸ್ಸಲಾಮಿ, ಶರೀಫ್ ನಿಝಮಿ, ಆದಂ ಧಾರ್ಮಿ, ಮೊಹಮ್ಮದ್ ಮುಸ್ಲಿಯಾರ್, ಕೊಣಾಲು ಸರಕಾರಿ ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಫೀಕ್ ಕೆ.ಇ., ತೌಫೀಕ್ ಎಂ.ಕೆ., ಫೈಝಲ್ ಶೇಖ್, ಶಫೀಕ್ ಕೋಲ್ಪೆ, ಕೆ.ಕೆ.ರಝಾಕ್, ಅಝೀಝ್ ಎನ್.ಕೆ., ಮುಸ್ತಾಫ ಎಂ., ಸಿದ್ಧೀಕ್ ಎಂ.ಕೆ., ಹಾಗೂ ಕೋಲ್ಪೆಯ ವಿವಿಧ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ನೆಲ್ಯಾಡಿಯಲ್ಲಿ ಸನ್ಮಾನ;
ನೆಲ್ಯಾಡಿಯಲ್ಲೂ ವಿವಿಧ ಸಂಘಟನೆಗಳಿಂದ ಮೊಹಮ್ಮದ್ ಹಿಶಾಮ್ಗೆ ಗೌರವಾರ್ಪಣೆ ಮಾಡಲಾಯಿತು. ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ನೋಟರಿ,ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಸದಸ್ಯ ಮೊಹಮ್ಮದ್ ಇಕ್ಬಾಲ್, ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಮಾಜಿ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ಕುಮಾರ್, ಶಿವಣ್ಣ ಪಿ.ಹೆಗ್ಡೆ, ಎನ್.ಎಸ್.ಸುಲೈಮಾನ್, ಎಸ್ಡಿಪಿಐ ಮುಖಂಡ ಸಿದ್ದೀಕ್ ಮಣ್ಣಗುಂಡಿ, ಶಿಬು ವರ್ಗೀಸ್, ಮ್ಯಾಥ್ಯು ಶಿಬಾಜೆ ಮತ್ತಿತರರು ಉಪಸ್ಥಿತರಿದ್ದರು.










