ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

0

ನಿಡ್ಪಳ್ಳಿ; ಇಲ್ಲಿಯ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ  ನವರಾತ್ರಿ ಉತ್ಸವಕ್ಕೆ ಅ.11 ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ನಂತರ ಶ್ರೀ ದೇವರಿಗೆ ಪಂಚವಿಂಶತಿ ಹವನ ನಡೆಯಿತು. ಮಂಗಳೂರು ಬೈಕಂಪಾಡಿ ಯಶಸ್ವಿ ಇಂಜಿನಿಯರ್ಸ್ ಇದರ ಆಡಳಿತ ಪಾಲುದಾರರಾದ ದಿನೇಶ್ ಕುಮಾರ್ ಪಳಂಬೆ ಇವರು ದೀಪ ಬೆಳಗಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ನಂತರ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮಂದಾರಗಿರಿ ಇದರ ಸದಸ್ಯರಿಂದ ಭಜನಾ ಸೇವೆ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

  ಬೆಟ್ಟಂಪಾಡಿ ಪ್ರಿಯದರ್ಶಿನಿ ಅಂಗ್ಲ ಮಾಧ್ಯಮ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ವಂದಿಸಿದರು. ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡರು. ಇಂದು ರಾತ್ರಿ ಶ್ರೀ ದೇವರಿಗೆ ಸಾಮೂಹಿಕ ವಿಶೇಷ ರಂಗ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here