







ಪುತ್ತೂರು: ಪುತ್ತೂರು ತಾಲೂಕು ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಅಂಬೇಡ್ಕರ್ ಭವನ ಹೋರಾಟ ಸಮಿತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.


ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ರವರ ಭವನ ಇರುವುದಿಲ್ಲ. ತಾಲೂಕು ಹೃದಯ ಭಾಗದಲ್ಲಿ ಒಂದು ಅಂಬೇಡ್ಕರ್ ಭವನ ಬೇಕೆಂದು 20 ವರ್ಷಗಳಿಂದ ಈ ಭಾಗದ ಪರಿಶಿಷ್ಟ ಜಾತಿ ವಿಭಾಗದ ಮತ್ತು ಜಾತ್ಯಾತೀತ ಮನಸುಗಳ ಒತ್ತಾಯವಾಗಿದೆ. ಈಗಾಗಲೇ ಪುತ್ತೂರು ತಾಲೂಕಿನ ಬನ್ನೂರು ಎಂಬಲ್ಲಿ ಜಾಗ ಕಾದಿರಿಸಲಾಗಿದ್ದು ಶಿಲಾನ್ಯಾಸ ಮಾಡಿ ಸುಮಾರು 10 ತಿಂಗಳು ಕಳೆದಿರುತ್ತದೆ. ಆದರೂ ಇದುವರೆಗೂ ಸುಮಾರು 20 ವರ್ಷಗಳ ಮೇಲ್ಪಟ್ಟ ಬೇಡಿಕೆಯಾದ ಅಂಬೇಡ್ಕರ್ ಭವನ ನಿರ್ಮಾಣ ಆಗಿರುವುದಿಲ್ಲ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಭವನ ನಿರ್ಮಿಸದೇ ಹೋದರೆ ಮುಂದಿನ ದಿನಗಳಲ್ಲಿ ದ.ಕ ಜಿಲ್ಲಾ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.



ದಲಿತ ಸಂಘಟನೆಗಳ ಮುಖಂಡ ರಾಜು ಹೊಸ್ಮಠ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೇಸಪ್ಪ ನೆಕ್ಕಿಲು, ಬಾಬು ಎನ್. ಸವಣೂರು, ಸ್ಥಾಪಕ ಸಂಘಟನಾ ಸಂಚಾಲಕ ಕೃಷ್ಣಪ್ಪ, ಮೊಗೇರ ಯುವ ವೇದಿಕೆ ಮಾಜಿ ಅಧ್ಯಕ್ಷ ಶೇಖರ್ ಮಾಡಾವು, ಮರಾಟಿ ಸಂಘ ತಾಲೂಕು ಉಪಾಧ್ಯಕ್ಷ ಸದಾಶಿವ ನಾಯ್ಕ, ಶಾಂತಪ್ಪ ನರಿಮೊಗರು, ಪ್ರವೀಣ ಕುಮಾರ್ ಎಮಾಜೆ, ಚಂದ್ರ ಬೀರಿಗ, ಸುರೇಶ್ ನಿಡ್ಪಳ್ಳಿ, ರವಿ ತೆಂಕಿಲ, ದನಂಜಯ ಕಬಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.










