









ಪುತ್ತೂರು: ತುಳು ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿಸಿದ ಪ್ರಯುಕ್ತ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪಾಣಾಜೆ ಬಂಟರ ಸಂಘ (ರಿ.) ಹಾಗೂ ಮಹಿಳಾ ಬಂಟರ ಸಂಘದ ವತಿಯಿಂದ ಅವರ ನಿವಾಸಕ್ಕೆ ತೆರಳಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.



ಈ ಸಂದರ್ಭದಲ್ಲಿ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಶ್ರೀಮತಿ ಸುಮಾ ಅಶೋಕ್ ಕುಮಾರ್ ರೈ, ಪಾಣಾಜೆ ಬಂಟರ ಸಂಘದ ಅಧ್ಯಕ್ಷ ರಮಾನಾಥ ರೈ ಪಡ್ಯಂಬೆಟ್ಟು, ಗೌರವ ಸಲಹೆಗಾರ ಜಗನ್ಮೋಹನ ರೈ ಸೂರಂಬೈಲು, ಉಪಾಧ್ಯಕ್ಷ ಸದಾಶಿವ ರೈ ಸೂರಂಬೈಲು, ಪ್ರಧಾನ ಕಾರ್ಯದರ್ಶಿ ಮನೋಜ್ ರೈ ಸೂರಂಬೈಲು, ಕಾರ್ಯದರ್ಶಿ ಸುಭಾಷ್ ರೈ ಚಂಬರಕಟ್ಟ, ಕೋಶಾಧಿಕಾರಿ ಉಮೇಶ್ ರೈ ಗಿಳಿಯಾಲು, ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಕೋಟೆ, ಪುತ್ತೂರು ಬಂಟರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಚೆಲ್ಯಡ್ಕ, ಅನಿತಾ ಹೇಮನಾಥ ಶೆಟ್ಟಿ ಕಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಣಾಜೆ ಬಂಟರ ಸಂಘದ ಹಿರಿಯರಾದ ಆನಂದ ರೈ ಸೂರಂಬೈಲು, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ವಿಶ್ವನಾಥ ರೈ ಕಡಮಾಜೆ, ಜಗನ್ನಾಥ ರೈ ಸೂರಂಬೈಲು, ಸೋಮಪ್ಪ ರೈ ಅರ್ದಮೂಲೆ, ಜಯರಾಮ ಆಳ್ವ ಸೂರಂಬೈಲು, ಯತಿರಾಜ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಕೋಟೆ, ಮಹಿಳಾ ಬಂಟರ ಸಂಘದ ಗೌರವ ಸಲಹೆಗಾರ್ತಿ ಜಯಲಕ್ಷ್ಮಿ ರೈ ಸೂರಂಬೈಲು, ಪ್ರಧಾನ ಕಾರ್ಯದರ್ಶಿ ವೇದಾವತಿ ರೈ ಮಂಟಮೆ, ಉಪಾಧ್ಯಕ್ಷೆ ದೇವಿಕಾ ರೈ ಗಿಳಿಯಾಲು, ಕಾರ್ಯದರ್ಶಿ ಅನುರಾಧಾ ರೈ ಕೊಂದಲಡ್ಕ, ಕೋಶಾಧಿಕಾರಿ ಪ್ರತಿಭಾ ಶೆಟ್ಟಿ ಸೂರಂಬೈಲು ಹಾಗೂ ಪಾಣಾಜೆ ಬಂಟರ ಸಂಘದ ನೂರಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.










