ಗೆಜ್ಜೆಗಿರಿ ನವರಾತ್ರಿ ಉತ್ಸವಕ್ಕೆ ಚಾಲನೆ: ಭಜನಾ ಸಂಕೀರ್ತನೆ

0

ಬಡಗನ್ನೂರು: ಭಜನೆಯಿಂದ ಮನಸ್ಸಿಗೆ ಮತ್ತು ಮೆದುಳಿಗೆ ಏಕಾಗ್ರತೆ ಬರುತ್ತದೆ ಎಂದು ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಹೇಳಿದರು.

ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದೆತಿ, ಕೋಟಿ-ಚೆನ್ನಯ ಮೂಲಸ್ಥಾನದಲ್ಲಿ 10 ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

“ನವರಾತ್ರಿ ಇಡೀ ದೇಶದಲ್ಲಿ ಪವಿತ್ರ ದಿನ. ಈ ಶುಭ ಸಂದರ್ಭದಲ್ಲಿ ತಾಯಿ ದುರ್ಗೆಯನ್ನು ನೆನೆದು ಕಷ್ಟ ನಿವಾರಣೆಗೆ ಪ್ರಾರ್ಥಿಸುತ್ತೇವೆ. ಅದೇ ರೀತಿ ಶ್ರೀ ಕ್ಷೇತ್ರದಲ್ಲಿ ಮಾತೆ ದೇಯಿ ಬೈದೆತಿ ಮತ್ತು ಕೋಟಿ-ಚೆನ್ನಯರು ಕ್ಷೇತ್ರವನ್ನು ಬೆಳಗಿದ್ದಾರೆ. ಅವರನ್ನು ನೆನೆದು 9 ದಿನಗಳ ಕಾಲ ಭಜನಾ ಸಂಕೀರ್ತನೆ, ಶ್ರೀ ದುರ್ಗಾ ಪೂಜೆ ನಡೆಸಿ 10ನೇ ದಿನ ವಿಜಯದಶಮಿ ಆಚರಿಸಲಾಗುತ್ತದೆ. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗಿ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ. ಕ್ಷೇತ್ರ ಇನ್ನಷ್ಟು ಬೆಳಗಲಿ” ಎಂದು ಶುಭ ಹಾರೈಸಿದರು.

ಕ್ಷೇತ್ರದ ತಂತ್ರಿವರ್ಯ ಶಿವಾನಂದ ಶಾಂತಿವರ್ಯರ ಪೌರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ಕಾರ್ಯಕ್ರಮದಲ್ಲಿ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಒಕ್ಕಲಿಗ ಗೌಡ ಸಮಾಜ ಸಂಘದ ಈಶ್ವರಮಂಗಲ ವಲಯ ಉಸ್ತುವಾರಿ ಜಗನ್ನಾಥ ಪಟ್ಟೆ, ಮಂಗಳೂರು NH ಸಬ್ ಡಿವಿಜನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ಗುರುಪ್ರಸಾದ್, ಬಂಟ್ವಾಳ ಸರ್ಕಾರಿ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ. ಪ್ರತ್ಯುಷ್, ಬೆಳ್ತಂಗಡಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ ಪೂಜಾರಿ ಪಡಡ್ಕ, ಗೆಜ್ಜೆಗಿರಿ ಆಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮೂತ್ತೇಸರ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ರಾಜರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್‌ದಾಸ್ ವಾಮಂಜೂರು, ಸುಜಿತಾ ವಿ. ಬಂಗೇರ, ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ನವರಾತ್ರಿ ಉತ್ಸವ ಸಂಚಾಲಕ ಹರೀಶ್ ಕೆ. ಪೂಜಾರಿ, ನಾರಾಯಣ ಮಚ್ಚಿನ, ನಾಗೇಶ್ ಪೂಜಾರಿ ಬೈಕಂಪಾಡಿ, ಕೆ.ಟಿ. ಪೂಜಾರಿ, ಮೂರ್ತೆದಾರ ಸೇವಾ ಸಂಘದ ಅಧ್ಯಕ್ಷ ಆರ್.ಸಿ. ನಾರಾಯಣ ರೆಂಜ, ಜಯರಾಮ ಬಂಗೇರ ಹೇರಾಜೆ ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.

ಮಂಗಳೂರು ಕೋಣಾಜೆ ಗ್ರಾಮ ಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಬಂಟ್ವಾಳ ಯುವವಾಹಿನಿ ಮಾಣಿ ಘಟಕದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.

LEAVE A REPLY

Please enter your comment!
Please enter your name here