







ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್, ಬನ್ನೂರು ಸಂತ ಅಂತೋನಿ ಚರ್ಚ್ ನ ಕಥೊಲಿಕ್ ಸಭಾ, ಮದರ್ ತೆರೆಸಾ ಸ್ತ್ರೀ ಸಂಘಟನ್, ಆರೋಗ್ಯ ಆಯೋಗ, ಐಸಿವೈಎಂ, ವೈ ಸಿ ಎಸ್. ಬನ್ನೂರು ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಬನ್ನೂರು ಚರ್ಚ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.


ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಬಾಲ್ತಾಜಾರ್ ಪಿಂಟೊರವರು ಉದ್ಘಾಟಿಸಿ, ಪ್ರತಿಯೋರ್ವರು ತಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಎಚ್ಚರಿಕೆ ವಹಿಸಿ ಎಂದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಪಿ.ಆರ್.ಒ. ಆಮಿಷ ಡಿ.ಆಜಿಲಾ, ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬನ್ನೂರು ಕ್ಲಿನಿಕ್ ನ ವೈದ್ಯ ಡಾ.ಮಲ್ಲಿಕಾರ್ಜುನ ಟಿ., ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನ ಅಧ್ಯಕ್ಷೆ ಲೀನಾ ಮಚಾದೋ, ಬನ್ನೂರು ಕಥೊಲಿಕ್ ಸಭಾದ ಅಧ್ಯಕ್ಷ ಡೆನ್ನಿಸ್ ಮಸ್ಕರೇನ್ಹಸ್, ಮದರ್ ತೆರೆಸಾ ಸ್ತ್ರೀ ಸಂಘಟನ್ ಅಧ್ಯಕ್ಷೆ ಜುಲಿಯಾನ ವಾಸ್, ಲಯನ್ಸ್ ವಲಯಾಧ್ಯಕ್ಷ ರಜಿತ್ ಆಳ್ವ, ಲಯನ್ಸ್ ಮಾಜಿ ರೀಜನ್ ಚೇರ್ ಪರ್ಸನ್ ಲ್ಯಾನ್ಸಿ ಮಸ್ಕರೇನ್ಹಸ್, ಬನ್ನೂರು ಚರ್ಚ್ ಆರೋಗ್ಯ ಆಯೋಗ ಸಂಚಾಲಕಿ ನಿಶಾ ಮಿನೇಜಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಐಸಿವೈಎಂ/ವೈಸಿಎಸ್ ಬನ್ನೂರು ಘಟಕದ ಕಾರ್ಯದರ್ಶಿ ಕು.ಸಿಂತಿಯ ಸೀಮಾ ಡಿಸೋಜ, ಪಡೀಲ್ ಚೈತನ್ಯ ಮಿತ್ರ ವೃಂದದ ಅಧ್ಯಕ್ಷ ಮಂಜುನಾಥ್ ಕೆ. ವಿಷ್ಣು ಯುವಕ ಮಂಡಲ ಅಧ್ಯಕ್ಷ ಸುರೇಂದ್ರ ಅಶ್ವ ಫ್ರೆಂಡ್ಸ್ ಬೀರ್ನ ಹಿತ್ಲು ಉಪಸ್ಥಿತರಿದ್ದರು. ಜಾಸ್ಮಿನ್ ಡಿ’ಸೋಜ, ನಿಶಾ ಮಿನೇಜಸ್, ಐರಿನ್ ಡಿ’ಸೋಜ ಪ್ರಾರ್ಥಿಸಿದರು.



ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷೆ ಲೀನಾ ಮಚಾದೋ ಸ್ವಾಗತಿಸಿ, ಕಾರ್ಯದರ್ಶಿ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು ವಂದಿಸಿದರು. ಲಯನ್ಸ್ ಕ್ರೌನ್ ನ ಪೂರ್ವಾಧ್ಯಕ್ಷ ವಿಕ್ಟರ್ ಶರೋನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.ಬನ್ನೂರು ಚರ್ಚ್ ನ ಸಂಘ ಸಂಸ್ಥೆಗಳ ಸದಸ್ಯರು, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನ ಸದಸ್ಯರು, ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ಸದಸ್ಯರು, ಸಿ.ಎಲ್.ಸಿ.ಸದಸ್ಯರು, ಮರೀಲ್ ಚರ್ಚ್ ಬಾಂಧವರು ಶಿಬಿರದಲ್ಲಿ ಪಾಲ್ಗೊಂಡರು.
ಲಯನ್ಸ್ ಸದಸ್ಯರು ಮತ್ತು ಇತರ ದಾನಿಗಳಿಂದ ಒಟ್ಟು 51 ಯುನಿಟ್ ರಕ್ತವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರಿಗೆ ನೀಡಲಾಯಿತು.ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬನ್ನೂರು ಕ್ಲಿನಿಕ್ ನ ಸಹಭಾಗಿತ್ವದಲ್ಲಿ 84 ಫಲಾನುಭವಿಗಳು ಉಚಿತ ರಕ್ತದೊತ್ತಡ, ಮಧುಮೇಹ, ಮತ್ತು ಹಿಮೋಗ್ಲೋಬಿನ್ ನ ತಪಾಸಣೆಯನ್ನು ಮಾಡಿಸಿಕೊಂಡರು.










