







ಕೆಯ್ಯೂರು:ಶ್ರೀ ಕ್ಷೇತ್ರ ಕೆಯ್ಯೂರು ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದೇವಳದ ವಠಾರದಲ್ಲಿ ಅ.11 ರಂದು, ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣೇಶ್ ಭಟ್ ಮತ್ತು ಆರ್ತ್ಯಡ್ಕ ಕಿಶೋರ್ ಭಟ್ ,ಮಹಾ ಗಣಪತಿ ಹೋಮ ಮತ್ತು ಚಂಡಿಕಾಯಾಗದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ 10.30ಕ್ಕೆ ತೆನೆ ತುಂಬಿಸುವ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನೇರವೇರಿಸಿದರು.






ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ. ಕೆ. ಜಯರಾಮ ರೈ ಕೆಯ್ಯೂರು, ಸದಸ್ಯರುಗಳಾದ ಉಮಾ ಕಾಂತ್ ಬೈಲಾಡಿ,, ಅಶೋಕ್ ರೈ ದೇರ್ಲ, ಚಂದ್ರಶೇಖರ ಪೂಜಾರಿ ಕಣಿಯಾರು,, ದಾಮೋದರ ಪೂಜಾರಿ ಕೆಂಗುಡೇಲು, ಜಲಜಾಕ್ಷಿ ಎ.ರೈ ಸಾಗು, ಸುಜಯ ಗಂಗಾಧರ ಪೂಜಾರಿ ಕೆಯ್ಯೂರು, ಶ್ರೀ ಕ್ಷೇತ್ರ ಕೆಯ್ಯೂರು ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚೆನ್ನಪ್ಪ ರೈ ದೆರ್ಲ ಮತ್ತು ಸದಸ್ಯರುಗಳು,, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಅರ್ಚಕವೃಂದ,ನೌಕರವೃಂದ, ಸಹಕರಿಸುವ ಸಂಘ ಸಂಸ್ಥೆಗಳು, ಊರ ಹತ್ತು ಸಮಸ್ತರು, ಉಪಸ್ಥಿತರಿದ್ದರು.










