ವಿಎಚ್‌ಪಿ, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಆಯೋಜನೆ – ನಾಳೆ : (ಅ.13) ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಸಾಮೂಹಿಕ ದುರ್ಗಾಪೂಜೆ

0

ಬೆಟ್ಟಂಪಾಡಿ: ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ – ಪೂಜಾ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇದರ ವತಿಯಿಂದ 14 ನೇ ವರ್ಷದ ಸಾಮೂಹಿಕ ದುರ್ಗಾಪೂಜೆಯು ಕಶೆಕೋಡಿ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ಅ. 13 ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ.


ಸಂಜೆ ಭಜನಾ ಕಾರ್ಯಕ್ರಮ, ದುರ್ಗಾಪೂಜೆ ಆರಂಭಗೊಂಡು ರಾತ್ರಿ 7.30 ಕ್ಕೆ ಮಹಾಮಂಗಳಾರತಿ ಜರಗಲಿದೆ. ಬಳಿಕ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾಮೂಹಿಕ ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ಕಿರಣ್‌ರಾಜ್ ಕಕ್ಕೂರು ವಹಿಸಲಿದ್ದಾರೆ. ಮೂಡಬಿದ್ರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ವಾದಿರಾಜ ಕಲ್ಲೂರಾಯ ಧಾರ್ಮಿಕ ಭಾಷಣ ಮಾಡಲಿದ್ದಾರೆ. ನಿವೃತ್ತ ಬಿಎಸ್‌ಎಫ್ ಯೋಧ ನವೀನ್ ರೈ ಬಿಜಲ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಉದ್ಯಮಿ ವಸಂತ ಪೈ ಬದಿಯಡ್ಕ, ಪುತ್ತೂರು ಗ್ರಾಮಾಂತರ ಪ್ರಖಂಡ ವಿಎಚ್‌ಪಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಬೆಂಗಳೂರು ಶ್ರೀ ವೆಂಕಟೇಶ್ವರ ಪವರ್ ಸೊಲ್ಯುಷನ್ಸ್ ಮ್ಹಾಲಕ ಸತ್ಯಾನಂದ ನಿಡಿಯಡ್ಕ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದಿವಾಕರ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಕಮಲ್ ಕನ್‌ಸ್ಟ್ರಕ್ಷನ್ ಮ್ಹಾಲಕ ಕಮಲ್ ಕುಲಾಲ್, ಬೆಟ್ಟಂಪಾಡಿ ಮಾತೃಮಂಡಳಿ ಮಾಜಿ ಅಧ್ಯಕ್ಷೆ ಪ್ರಭಾವತಿ ಆರ್.ಸಿ. ರೈ ಮದಕ, ಪುತ್ತೂರಿನ ಹೆವಿ‌ ವೆಹಿಕಲ್ ಮೆಕ್ಯಾನಿಕ್ ರೂಪೇಶ್ ಪೂಜಾರಿ ಪಾಲ್ಗೊಳ್ಳಲಿದ್ದಾರೆ‌. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಲಿದೆ ಎಂದು ಪೂಜಾ ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here